ಕುಂದಾಪುರ: ಕುಂದಾಪುರ ತಾಲೂಕು ವ್ಯಾಪ್ತಿಯ ತೆಕ್ಕಟ್ಟೆ ಗ್ರಾಮ ಪಂಚಾಯತ್ ಗ್ರಾಮಸಭೆಯಲ್ಲಿ ಪ್ರತಿಭಟನೆ ನಡೆಯಿತು.ಗ್ರಾಮ ಸಭೆ ಆರಂಭವಾದಾಗ ಪಂಚಾಯತ್ ಸದಸ್ಯೆ ಪ್ರತಿಮಾ ಭಟ್ ವಿರುದ್ಧ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಯಿತು.ಪ್ರತಿಮಾ ಅವರು, ಇನ್ನೋರ್ವ ಸದಸ್ಯೆ ವಿಜಯ ಭಂಡಾರಿ ಕುರಿತು ಏಕವಚನ ಪ್ರಯೋಗಿಸಿದ್ದಾರೆ ಎಂದು ಆರೋಪಿಸಿ ಈ ಪ್ರತಿಭಟನೆ ನಡೆದಿದೆ.ಈ ವೇಳೆ ಸದಸ್ಯರುಪ್ರತಿಮಾ ಭಟ್ ಬೇಷರತ್ ಕ್ಷಮೆಯಾಚಿಸುವಂತೆ ಸಭೆಯಲ್ಲಿ ಪಟ್ಟು ಹಿಡಿದ ಪ್ರಸಂಗ ನಡೆಯಿತು.
ಕೆಲಕಾಲದ ಬಳಿಕ ಗ್ರಾಮಸಭೆ ಮರು ಆರಂಭವಾಗುತ್ತಿದ್ದಂತೆ ಮೀನು ಕಟ್ಟಿಂಗ್ ಶೆಡ್ ವಿಚಾರವಾಗಿ ಮತ್ತೆ ಪ್ರತಿಭಟನೆ ಬಿಸಿ ತಟ್ಟಿತು.
ಅವಳಿ ಪ್ರತಿಭಟನೆಯಿಂದ ಬೇಸತ್ತ ಇಲಾಖೆಯ ಅಧಿಕಾರಿಗಳು,ಗ್ರಾಮ ಸಭೆಗೆ ಆಗಮಿಸಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಶ್ರೀಯಾನ್ ನೇತೃತ್ವದಲ್ಲಿ ರಾಜಿ ಯತ್ನ ನಡೆಸಿದರು.ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಅವರೂ ಕೂಡ ಪ್ರತಿಭಟನೆ ತಣಿಸಲು ಯತ್ನಿಸಿದರು.ಒಟ್ಟಿನಲ್ಲಿ ತೆಕ್ಕಟ್ಟೆ ಗ್ರಾಮ ಪಂಚಾಯತ್ ನ ಗ್ರಾಮ ಸಭೆ ಇಡೀ ದಿನ ಪ್ರತಿಭಟನೆಗೆ ವೇದಿಕೆಯಾಯ್ತು.
Kshetra Samachara
28/08/2021 04:33 pm