ಮಂಗಳೂರು: ಕೋವಿಡ್ ನೆಪವೊಡ್ಡಿ ಸರಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ನಿರ್ಬಂಧ ವಿಧಿಸಿರುವುದನ್ನು ಶ್ರೀರಾಮ ಖಂಡಿಸಿದೆ. ಆದ್ದರಿಂದ ಸರಕಾರ ತಮ್ಮ ನಿರ್ಧಾರದಿಂದ ಹಿಂದೆ ಸರಿದು ಗಣೇಶೋತ್ಸವಕ್ಕೆ ಅವಕಾಶ ನೀಡಬೇಕೆಂದು ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್ ಹೇಳಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಬೇಕೆಂದು ಪ್ರತೀ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಸಿಎಂಗೆ ಮನವಿ ಸಲ್ಲಿಸಿದ್ದೇವೆ. ಆ ಬಳಿಕವೂ ಅವಕಾಶ ಕೊಡದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗಣೇಶೋತ್ಸವ ವರ್ಷಕ್ಕೆ ಒಂದು ಬಾರಿ ನಡೆಯುತ್ತಿದ್ದು, ಇದು ಹಿಂದೂಗಳ ಧಾರ್ಮಿಕ ಹಕ್ಕಾಗಿದೆ. ಕೇವಲ ಸಾರ್ವಜನಿಕ ಗಣೇಶೋತ್ಸವ ನಿರ್ಬಂಧ ಮಾಡುವುದರಿಂದ ಕೋವಿಡ್ ನಿರ್ಣಾಮ ಆಗುವುದಿಲ್ಲ. ಕೋವಿಡ್ ಮಾರ್ಗಸೂಚಿ ಅನುಸರಿಸಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕು. ಆದ್ದರಿಂದ ಆಗಸ್ಟ್ 29ರ ವರೆಗೆ ಗಡುವು ನೀಡುತ್ತಿದ್ದು, ಆ ಬಳಿಕವೂ ಅವಕಾಶ ನೀಡದಿದ್ದಲ್ಲಿ ಪ್ರತಿ ಜಿಲ್ಲೆಯ ಒಂದು ಶಾಸಕರ ಮನೆ ಅಥವಾ ಕಚೇರಿ ಮುಂಭಾಗ ಧರಣಿ ನಡೆಸಲಿದ್ದೇವೆ ಎಂದು ಆನಂದ ಶೆಟ್ಟಿ ಅಡ್ಯಾರ್ ಎಚ್ಚರಿಕೆ ನೀಡಿದರು.
Kshetra Samachara
26/08/2021 03:32 pm