ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕಲ್ಯಾಣ್ ಸಿಂಗ್ ನಿಧನಕ್ಕೆ ಪೇಜಾವರ ಶ್ರೀ ತೀವ್ರ ಸಂತಾಪ

ಉಡುಪಿ: ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಆಂದೋಲನದಲ್ಲಿ ಸದಾ ಸ್ಮರಣೀಯ ಪಾತ್ರ ವಹಿಸಿದ್ದ ಹಿರಿಯ ಮುತ್ಸದ್ದಿ ಕಲ್ಯಾಣ್ ಸಿಂಗ್ ಜೀ ಯವರ ನಿಧನದಿಂದ ತೀವ್ರ ವಿಷಾದವಾಗಿದೆ. ಹಿಂದೂ ಸಿದ್ಧಾಂತಕ್ಕೆ ಬದ್ಧರಾಗಿದ್ದ ಅವರು ನಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥಶ್ರೀಪಾದರೊಂದಿಗೂ ವಿಶೇಷ ಆತ್ಮೀಯ ಬಾಂಧವ್ಯ ಹೊಂದಿದ್ದರು.ಅವರ ಆತ್ಮಕ್ಕೆ ನಮ್ಮ ಆರಾಧ್ಯಮೂರ್ತಿಯೂ ಆಗಿರುವ ಅಯೋಧ್ಯಾಪತಿ ಶ್ರೀ ರಾಮಚಂದ್ರ ದೇವರು ಸದ್ಗತಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇವೆ ಎಂದು ಅಯೋಧ್ಯಾ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರಾದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಂತಾಪ ವ್ಯಕ್ತಪಡಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

22/08/2021 09:39 am

Cinque Terre

16.59 K

Cinque Terre

3

ಸಂಬಂಧಿತ ಸುದ್ದಿ