ಮಂಗಳೂರು: ಜನಾಶೀರ್ವಾದ ಯಾತ್ರೆಯಲ್ಲಿ ಗಾಳಿಯಲ್ಲಿ ಗುಂಡು ಹಾರಾಟ ವಿಚಾರಕ್ಕೆ ಸಂಬಂಧಿಸಿದಂತೆ
ಮಂಗಳೂರಿನಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಬಾಲಿಶವಾದ ಹೇಳಿಕೆ ನೀಡಿದ್ದಾರೆ. ಮಲೆನಾಡು ಭಾಗದಲ್ಲಿ ತುಂಬಾ ಖುಷಿಯಾದಾಗ ಗಾಳಿಯಲ್ಲಿ ಗುಂಡು ಹಾರಾಟ ಮಾಡುತ್ತೇವೆ. ಯಾರಾದರೂ ತೀರಿ ಹೋದ ಸಂದರ್ಭದಲ್ಲೂ ಗಾಳಿಯಲ್ಲಿ ಗುಂಡು ಹಾರಾಟ ಮಾಡುತ್ತೇವೆ.
ಕೊಡಗು ಮಲೆನಾಡು ಭಾಗದಲ್ಲಿ ಇಂತಹ ಸಂಪ್ರದಾಯ ಇದೆ ಎಂದ ಅವರು, ಇನ್ನೂ ಕೆಲವೆಡೆ ಇಂತಹ ಸಂಪ್ರದಾಯಗಳು ಇರಬಹುದು. ಭಗವಂತ್ ಖೂಬಾ ಬಂದ ಸಂಧರ್ಭದಲ್ಲೂ ಖುಷಿಗೆ ಗಾಳಿಯಲ್ಲಿ ಗುಂಡು ಹಾರಾಟ ಮಾಡಿರಬಹುದು. ಆದರೆ ಇದು ಸಾರ್ವಜನಿಕವಾಗಿ ಮಾಡಿದ್ದು ತಪ್ಪು. ಇದರಿಂದ ಯಾರಿಗಾದೂ ತಾಗಿ ಅನಾಹುತವಾಗಬಹುದು. ಈ ಬಗ್ಗೆ ಈಗಾಗಲೇ ಎಫ್ ಐ ಆರ್ ದಾಖಲಾಗಿದೆ ಎಂದರು.
Kshetra Samachara
20/08/2021 03:43 pm