ಉಡುಪಿ: ಕೇಂದ್ರ ಸರ್ಕಾರವು ಅಡುಗೆ ಅನಿಲದ ಬೆಲೆಯನ್ನು ನಿರಂತರವಾಗಿ ಏರಿಸುತ್ತಿರುವುದರ ವಿರುದ್ಧ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಇಂದು ದಿಢೀರ್ ಪ್ರತಿಭಟನೆ ನಡೆಯಿತು.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೇಲಿಯೋ ಅವರು ಮಾತನಾಡಿ, ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಸಿಲಿಂಡರ್ ಬೆಲೆಯಲ್ಲಿ ಐವತ್ತು ಪೈಸೆ ಅಥವಾ ಒಂದು ರೂಪಾಯಿ ಹೆಚ್ಚಳ ವಾದರೂ ರಸ್ತೆಗಿಳಿದು ಪ್ರತಿಭಟನೆಯಲ್ಲಿ ತೊಡಗುತ್ತಿದ್ದ ಶೋಭಾ ಕರಂದ್ಲಾಜೆ ಮತ್ತಿತರ ಬಿಜೆಪಿ ನಾಯಕರೂ ಇಂದು ದಿನೇ ದಿನೇ ಏರುತ್ತಿರುವ ಬೆಲೆಗಳ ಬಗ್ಗೆ ಯಾಕೆ ದ್ವನಿ ಎತ್ತಿ ಪ್ರತಿಭಟಿಸುತ್ತಿಲ್ಲ? ಬಿಜೆಪಿ ಸರ್ಕಾರದ ಈ ದುರಾಡಳಿತದ ಪರಿಣಾಮವಾಗಿ ಮಹಿಳೆಯರು ದಿನದೂಡುವುದೇ ಕಷ್ಟ ವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಗರ ಸಭೆಯ ಸದಸ್ಯರಾದ ರಮೇಶ್ ಕಾಂಚನ್, ಕೆಪಿಸಿಸಿ ಸಂಯೋಜಕ ಹರೀಶ್ ಕಿಣಿ ಹಾಗೂ ಡಾ.ಸುನೀತಾ ಶೆಟ್ಟಿ, ಉಡುಪಿ ಬ್ಲಾಕ್ ಅಧ್ಯಕ್ಷರಾದ ಸತೀಶ್ ಅಮೀನ್,ಕಾರ್ಕಳ ಬ್ಲಾಕ್ ಮಹಿಳಾ ಅಧ್ಯಕ್ಷರಾದ ಅನಿತಾ ಡಿ'ಸೋಜ,ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಭಾ ಶೆಟ್ಟಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಜ್ಯ ಸಹಸಂಚಾಲಕಿ ರೋಶನಿ ಒಲಿವರ್,ಕಾಪು ಪುರಸಭಾ ಸದಸ್ಯೆ ಶ್ರೀಮತಿ ಶಾಂತಲತಾ ಶೆಟ್ಟಿ,ಜಿಲ್ಲಾ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಶ್ರೀಮತಿ ಶಾಂತಿ ಪಿರೇರಾ, ಮೀನಾಕ್ಷಿ ಮಾಧವ ಬನ್ನಂಜೆ,ಆಗ್ನೆಸ್ ಡೇಸಾ, ಜ್ಯೋತಿ ಮೆನನ್, ಪುಷ್ಪಾ ಆಂಚನ್,ಸರಸ್ವತಿ ನಾಯ್ಕ್,ಆಶಾ ಕರ್ವಾಲೋ,ವಿನ್ನಿ ಡಿ'ಸೋಜ,ಗ್ರೇಸಿ ಕರ್ಡೋಜ,ನತಾಲಿಯಾ ಮಾರ್ಟಿಸ್,ಸಿಮಿ ಡಿ'ಸೋಜ,ಆಶಾ ಆಂಚನ್,ಸರೋಜಾ ನಾಯಿರಿ,ಭಾನು ಭಾಸ್ಕರ್,ಸುಚರಿತಾ, ಸುಗುಣ ಪೂಜಾರ್ತಿ, ಐರಿನ್ ಮಿನೇಜಸ್, ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷ ಶ್ರೀ ರೋಶನ್ ಶೆಟ್ಟಿ, ಮಾಜಿ ಸಹಸಂಚಾಲಕ ಶ್ರೀ ಪ್ರಭಾಕರ್ ಆಚಾರ್ಯ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಹಾಮ್ಮದ್,ಗಣೇಶ್ ನೆರ್ಗಿ,ಅಮೃತಾ ಪೂಜಾರಿ,ಪ್ರಮೀಳಾ,ಸುಮನಾ ಸುರೇಂದ್ರ,ಸುರೇಂದ್ರ ಆಚಾರ್ಯ,ಮೇರಿ ಡಿಸೋಜ,ಚಂದ್ರಾವತಿ ಭಂಡಾರಿ,ಸುಗಂಧಿ ಶೇಖರ್,ಇಂದಿರಾ ಆಚಾರ್ಯ ಹಾಗೂ ಪಕ್ಷದ ಮತ್ತಿತರ ನಾಯಕರೂ,ಕಾರ್ಯಕರ್ತರು ಉಪಸ್ಥಿತರಿದ್ದರು.
ಅಧ್ಯಕ್ಷೆ ಗೀತಾ ವಾಗ್ಳೆ ಅವರು ಸರ್ವರನ್ನೂ ಸ್ವಾಗತಿಸಿದರು.ಪ್ರಧಾನ ಕಾರ್ಯದರ್ಶಿ ಶಾಂತಿ ಪಿರೇರಾ ಅವರು ಧನ್ಯವಾದವಿತ್ತರು.
Kshetra Samachara
19/08/2021 09:40 pm