ಉಡುಪಿ: ಉಡುಪಿಯಲ್ಲಿ ನಡೆಯುತ್ತಿರುವ ಹಡಿಲು ಭೂಮಿ ಬೇಸಾಯ ಅಭಿಯಾನಕ್ಕೆ ಇವತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಾಥ್ ನೀಡಿದ್ದಾರೆ.ಉಡುಪಿಯ ಕಡೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಭತ್ತದ ಗದ್ದೆಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಕಳೆ ಕೀಳುವ ಕಾರ್ಯದಲ್ಲಿ ಭಾಗಿಯಾದರು.
ವಿದ್ಯಾರ್ಥಿಗಳ ಜೊತೆ ಗದ್ದೆಗಿಳಿದ ಸಚಿವೆ ,ತಲೆಗೆ ರೈತರ ಸಾಂಪ್ರದಾಯಿಕ ಮುಟ್ಠಾಳೆ ತೊಟ್ಟು ಕಳೆ ಕೀಳುವ ಕೆಲಸ ಮಾಡಿದರು.
ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ನಡೆಯುತ್ತಿರುವ ಅಭಿಯಾನದಲ್ಲಿ ಕಾಲೇಜು ವಿದ್ಯಾರ್ಥಿಗಳು ಗದ್ದೆಯ ಕಳೆ ಕೀಳುವ ಕೆಲಸ ಬಹಳ ದಿನಗಳಿಂದ ನಡೆಯುತ್ತಿದೆ.ಇವತ್ತು ಸಚಿವೆ ಈ ಅಭಿಯಾನಕ್ಕೆ ಆಗಮಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು.
Kshetra Samachara
19/08/2021 01:38 pm