ಮಂಗಳೂರು: ಹಿಂದೂ ಯುವತಿಯರನ್ನು ಲವ್ ಜಿಹಾದ್ ಬಲೆಗೆ ಬೀಳಿಸಿ ಉಗ್ರಗಾಮಿ ಚಟುವಟಿಕೆಗೆ ಬಳಸುವ ಭಯೋತ್ಪಾದಕರ ಷಡ್ಯಂತ್ರದ ವಿರುದ್ಧ ಮತ್ತು ಕರಾವಳಿ ಭಾಗದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನಾ ಚಟುವಟಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ಮಂಗಳೂರಲ್ಲಿ ಪ್ರತಿಭಟನೆ ನಡೆಸಿತು. ಹಂಪನಕಟ್ಟೆಯ ಕ್ಲಾಕ್ ಟವರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಮುಖಂಡ ಗಣರಾಜ್ ಭಟ್ ಕೆದಿಲ, ಹಿಂದೂ ತರುಣಿಯರ ಮನವೊಲಿಸಿ ತಮ್ಮ ಬಲೆಗೆ ಬೀಳಿಸಿಕೊಂಡು ಬಳಿಕ ಅವರಿಂದ ದೇಶದ್ರೋಹದ ಕೆಲಸವನ್ನು ಮಾಡಲಾಗುತ್ತಿದೆ. ನಮ್ಮ ಸಮಾಜವನ್ನು ರಕ್ಷಿಸುವ ಹೊಣೆಗಾರಿಕೆ ನಮಗಿದೆ ಜಾಗೃತಿಯಾಗುತ್ತದೆ, ನಾವೇ ಪೊಲೀಸರಾಗಿಬಿಡುತ್ತೇವೆ. ನಮ್ಮ ಸಮಾಜವನ್ನು ನಾವೇ ರಕ್ಷಿಸುತ್ತೇವೆ, ಅದಕ್ಕೆ ಅವಕಾಶ ಬೇಡ ಎಂದರು.
ಪ್ರತಿಭಟನೆಯ ನೇತೃತ್ವವನ್ನು ಹರೀಶ್ ಕುಮಾರ್, ಸತೀಶ್, ಸಂದೀಪ್ ಮೊದಲಾದವರು ವಹಿಸಿದ್ದರು.
Kshetra Samachara
17/08/2021 04:21 pm