ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ: ದೇಶಾಭಿಮಾನದ ರಥಯಾತ್ರೆಗೆ ಅಡ್ಡಿಪಡಿಸಿದ ಎಸ್.ಡಿ.ಪಿ.ಐ ಹಾಗೂ ಪಿ ಎಫ್ ಐ ಬ್ಯಾನ್ ಮಾಡುವಂತೆ ಹಿಂದು ಸಂಘಟನೆಗಳಿಂದ ಪ್ರತಿಭಟನೆ

ಬಜಪೆ: ಸ್ವಾತಂತ್ರ್ಯ ಅಮೃತಮಹೋತ್ಸದ ಅಂಗವಾಗಿ ಆಗಷ್ಟ್ 15ರಂದು ಪುತ್ತೂರು ತಾಲೂಕಿನ ಕಡಬ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯ ರಥದ ಯಾತ್ರೆಯನ್ನು ಹಮ್ಮಿಕೊಳ್ಳ ಲಾಗಿತ್ತು.ಇಂತಹುದೊಂದು ರಥಯಾತ್ರೆಯ ನಮ್ಮ ದೇಶಾಭಿಮಾನದ ಸಂಕೇತವಾಗಿತ್ತು.ರಥಯಾತ್ರೆಯು ಸಂಭ್ರಮದಿಂದ ಸಾಗುತ್ತಿದ್ದ ಸಂದರ್ಭದಲ್ಲಿ ಎಸ್.ಡಿ.ಪಿ ಐ,ಪಿಎಫ್ ಐ ಸಂಘಟನೆಯು ಸ್ವಾತಂತ್ರ್ಯ ರಥಕ್ಕೆ ಅಡ್ಡಿಪಡಿಸಿರುದನ್ನು ಖಂಡಿಸಿ ವಿಶ್ವ ಹಿಂದು ಪರಿಷತ್,ಬಜರಂಗದಳ,ಹಿಂದೂ ಜಾಗರಣ ವೇದಿಕೆ ಹಾಗೂ ಭಾರತೀಯ ಜನತಾ ಪಾರ್ಟಿಯ ಜಂಟಿ ಆಶ್ರಯದಲ್ಲಿ ಬಜಪೆ ಪೊಲೀಸ್ ಠಾಣೆ ಮುಂಭಾಗದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಯಿತು.

ದ.ಕ ಜಿಲ್ಲೆಯ ವಿವಿಧೆಡೆ ಕಳೆದ ಕೆಲವು ಸಮಯಗಳಿಂದ ಇಂತಹ ಶಾಂತಿ ಭಂಜಕ ಕೃತ್ಯಗಳು ನಿರಂತರವಾಗಿ ನಡೆಯುತ್ತಲೇ ಇದೆ.ಇದರ ಹಿಂದೆ ದ.ಕ ಜಿಲ್ಲೆಯಲ್ಲಿ ಗಲಭೆ ಎಬ್ಬಿಸುವ ಯೋಜಿತ ಷಡ್ಯಂತ್ರ ಇದೆ.ವಿವಿಧ ನೆವಗಳನ್ನು ಮುಂದಿಟ್ಟುಕೊಂಡು ಆಕ್ರಮಣ,ದಾಳಿ - ಹಲ್ಲೆ ಕೃತ್ಯಗಳನ್ನು ನಡೆಸುವುದು ನಡೆಯುತ್ತಲೇ ಇದೆ.ಗೋ ಕಳವು,ಗೋ ಕಳ್ಳ ಸಾಗಣೆ .ಗೋಹತ್ಯೆ,ಲವ್ ಜಿಹಾದ್,ಮತಾಂತರ ,ಹಿಂದು ಪವಿತ್ರ ಕ್ಷೇತ್ರಗಳನ್ನು ಅಪವಿತ್ರ ಗೊಳಿಸುವುದು ಇಂತಹ ಕೃತ್ಯಗಳು ಇದಕ್ಕೆ ಸಾಕ್ಷಿಯಾಗಿದೆ.

ಸಾಮರಸ್ಯ ಮತ್ತು ಸಹಬಾಳ್ವೆ ಬಯಸುವ ಹಿಂದೂ ಸಮಾಜ ಸಂಯಮದಿಂದ ಈ ಎಲ್ಲಾ ಕೃತ್ಯಗಳನ್ನು ಶಾಂತಿಯುತವಾಗಿ ಪ್ರತಿಭಟಿಸುತ್ತಿದೆ.

ಈ ದುಷ್ಕೃತ್ಯಕ್ಕೆ ಸಂಬಂದಿಸಿದಂತೆ ಸರಕಾರವು ಈ ಘಟನೆಯನ್ನು ಗಂಭೀರವಾಗಿ ಪರಿಗಣೆಸಬೇಕು.ಸ್ವಾತಂತ್ರ್ಯೋತ್ಸವಕ್ಕೆ ಅಡ್ಡಿಪಡಿಸಿದ ಎಸ್ ಡಿ ಪಿ ಐ ಮತ್ತು ಪಿಎಫ್ ಐ ಸಂಘಟನೆಗಳನ್ನು ನಿಷೇಧಿಸಬೇಕು.ಅಲ್ಲದೆ ಸ್ವಾತಂತ್ರ್ಯ ರಥಯಾತ್ರೆಗೆ ಅಡ್ಡಿಪಡಿಸಿದವರ ಮೇಲೆ ಪೊಲೀಸ್ ಇಲಾಖೆ ರಾಷ್ಟ್ರ ದ್ರೋಹದ ಮೊಕದ್ದಮೆ ದಾಖಲಿಸಬೇಕು.ಶಾಂತಿ ಭಂಜಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು.ಈ ಹಿನ್ನಲೆಯಲ್ಲಿ ಎಸ್ ಡಿಪಿ ಐ,ಪಿಎಫ್ ಐ ಮೇಲೆ ಸೂಕ್ತ ಕ್ರಮವನ್ನು ಕೈಗೊಂಡು ಗೃಹಸಚಿವರಿಗೆ ವರದಿಯನ್ನು ಸಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಅಗ್ರಹ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಂದೇಶ್ ಅವರಲ್ಲಿ ಮನವಿಯನ್ನು ನೀಡಲಾಯಿತು.ಪ್ರತಿಭಟನೆಯಲ್ಲಿ ಸಂಘ ಪರಿವಾರದ ಮುಖಂಡರುಗಳಾದ ಕೃಷ್ಣ ಕಜೆಪದವು,ರವಿ ಸುವರ್ಣ,ದಿನೇಶ್,ರಾಜೇಶ್ ಗಂಜಿಮಠ,ಹರೀಶ್ ಮಿಜಾರ್,ರಾಜು ಕಾಜಿಲ,ಸುಧಾಕರ,ರಿತೇಶ್ ಶೆಟ್ಟಿ,ಜಯಂತ್ ಸಾಲ್ಯಾನ್,ಮಂಜು ಪ್ರಸಾದ್,ವಿಜಯ ಕೆಂಜಾರ್,ನವೀನ್ ಅದ್ಯಪಾಡಿ,ಜೊಕಿಂ ಡಿ ಕೊಸ್ತಾ,ಸತೀಶ್ ಮರವೂರು,ಸೋಹಾನ್ ಅಧಿಕಾರಿ,ಪ್ರದೀಪ್ ಬಜಪೆ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

Edited By : Nagesh Gaonkar
Kshetra Samachara

Kshetra Samachara

17/08/2021 03:20 pm

Cinque Terre

10.61 K

Cinque Terre

1

ಸಂಬಂಧಿತ ಸುದ್ದಿ