ಉಡುಪಿ: ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ಪಕ್ಷ ಸಂಘಟನೆಯಲ್ಲಿ ಹಲವಾರು ಜವಾಬ್ದಾರಿಯುತ ಹುದ್ದೆಗಳನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದ ಜನಾರ್ಧನ ಭಂಡಾರ್ಕರ್ ಶೀಘ್ರ ಗುಣಮುಖರಾಗಲು ಇವತ್ತು ಜಿಲ್ಲಾ ಕಾಂಗ್ರೆಸ್ ವತಿಯಿಂದ ವಿಶೇಷ ಪ್ರಾರ್ಥನೆ ನಡೆಯಿತು.
ಉಡುಪಿಯ ಬನ್ನಂಜೆಯಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾಂಗ್ರೆಸ್ ನಾಯಕರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ನಡೆಸಿದರು.ಪಕ್ಷದ ನಿಷ್ಠಾವಂತ ಮುಖಂಡ, ನೇರ ನಡೆನುಡಿಯಿಂದ ಸದಾ ಚಟುವಟಿಕೆಯಿಂದಿದ್ದ ನಮ್ಮೆಲ್ಲರ ಆತ್ಮೀಯರಾದ ಕೆ ಜನಾರ್ದನ ಭಂಡಾರ್ಕಾರ್ ರವರು ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುದ್ದ ಹಸ್ತದಿಂದ ಪ್ರಾಮಾಣಿಕವಾಗಿ ಜನರ ಸಮಸ್ಯೆಗಳನ್ನು ಪಕ್ಷದ ಮೂಲಕ ಅಥವಾ ವೈಯುಕ್ತಿಕವಾಗಿ ಸಂಬಂಧಪಟ್ಟವರ ಗಮನಕ್ಕೆ ತಂದು ಅವುಗಳ ಪರಿಹಾರಕ್ಕೆ ಧ್ವನಿಯಾಗಿದ್ದ ಭಂಡಾರ್ಕಾರ್ ರವರು ಆದಷ್ಟು ಶೀಘ್ರದಲ್ಲಿ ಗುಣಮುಖರಾಗಿ ಆರೋಗ್ಯ ಮತ್ತು ಧೀರ್ಘಾಯುಷ್ಯ ಪಡೆಯುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಹಾರೈಸಿದ್ದಾರೆ.
ಈ ಸಂದರ್ಭ ಡಿಸಿಸಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು,ಗಫೂರ್ ,ಅಮೃತ್ ಶೆಣೈ ,ರಮೇಶ್ ಕಾಂಚನ್ ,ಜ್ಯೋತಿ ಹೆಬ್ಬಾರ್, ಯತೀಶ್ ಕರ್ಕೇರಾ ಮತ್ತಿ ತರರು ಉಪಸ್ಥಿತರಿದ್ದರು.
Kshetra Samachara
17/08/2021 02:52 pm