ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೋಟದ ಕಾರಂತ ಥೀಂ ಪಾರ್ಕ್ ಗೆ ಕನ್ನಡ ಸಂಸ್ಕ್ರತಿ ಸಚಿವ ಸುನೀಲ್ ಕುಮಾರ್ ಭೇಟಿ

ಕೋಟ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಕೋಟ ಶಿವರಾಮ ಕಾರಂತ ಥೀಂ ಪಾರ್ಕ್ ಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಭೇಟಿ ನೀಡಿ ಥೀಂ ಪಾರ್ಕ್ ನ ವಿನ್ಯಾಸಗಳನ್ನು ವೀಕ್ಷಿಸಿ,ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕಾರಂತರ ಜನ್ಮಭೂಮಿ ಹಾಗೂ ಈ ಥೀಂ ಪಾರ್ಕ್ ಗೆ ಭೇಟಿ ನೀಡಿ ಪುಳಕಿತನಾಗಿದ್ದೇನೆ. ಕಾರಂತರು ಚಲನಶೀಲ ವ್ಯಕ್ತಿತ್ವವಿರುವ ವ್ಯಕ್ತಿ.ಅದೊಂದು ಶಕ್ತಿ ಎನ್ನಬಹುದು. ಅವರು ನೇರ ನಡೆನುಡಿಯ ಮೂಲಕ ನಿಷ್ಠುರವಾದಿಯಾಗಿ ಗುರುತಿಸಿಕೊಂಡಿದ್ದರು.ಅವರ ಹೆಸರಿನಲ್ಲಿ ಸಿದ್ಧಗೊಂಡ ಈ ಥೀಂ ಪಾರ್ಕ್ ಮೂಲಕ ಮುಂದಿನ ಪೀಳಿಗೆಗೆ ಅವರ ಚರಿತ್ರೆ ಸಾರಲು ನೆರವಾಗಲಿದೆ. ಕೆಲವಷ್ಟು ಕೆಲಸ ಈಗಾಗಲೇ ಆಗಿದೆ.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಿಂದ ಯಾವುದೇ ರೀತಿಯ ಸಹಕಾರ ನೀಡಲು ಬದ್ಧ. 75ನೇ ಸ್ವಾತಂತ್ರ್ಯೋತ್ಸವದ ವರ್ಷದ ಅಮೃತ ಮಹೋತ್ಸವದ ಹೊಸ್ತಿಲ್ಲಲ್ಲಿ ವರ್ಷವಿಡೀ ಬೇರೆ ಬೇರೆ ರೀತಿಯ ಕಾರ್ಯಕ್ರಮ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸಿ ಕಾರಂತ ಥೀಂ ಪಾರ್ಕ್ ನ್ನು ಈ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಂಡಿದ್ದೇವೆ. ಕಾರಂತರು ತನ್ನ ಸಾಹಿತ್ಯದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿಕೊಂಡಿದ್ದಾರೆ. ಅದನ್ನು ಮತ್ತಷ್ಟು ಶ್ರೀಮಂತಗೊಳಿಸಲು ಇಲಾಖೆ ಬದ್ಧ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಸಚಿವರನ್ನು ಸಮಾಜಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗೌರವಿಸಿದರು.

Edited By : Shivu K
Kshetra Samachara

Kshetra Samachara

17/08/2021 12:39 pm

Cinque Terre

5.73 K

Cinque Terre

0

ಸಂಬಂಧಿತ ಸುದ್ದಿ