ಸುರತ್ಕಲ್: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಡಾ.ಬಿ.ಎ.ಮೊಹಿದೀನ್ ಬಾವ ಅವರು ತಮ್ಮ ಕಾರಿನಲ್ಲಿ ಸಂಚರಿಸುತ್ತಿರುವಾಗ ಪುತ್ತೂರಿನ ಇಬ್ಬರು ಯುವಕರ ಬೈಕ್ ಅಪಘಾತಕ್ಕೀಡಾಗಿತ್ತು. ತಕ್ಷಣ ತನ್ನ ಕಾರು ನಿಲ್ಲಿಸಿದ ಮೊಹಿದೀನ್ ಬಾವ ಗಾಯಾಳುಗಳಿಬ್ಬರನ್ನು ತನ್ನ ಕಾರಿನಲ್ಲೇ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಕೌಶಿಕ್ ಮತ್ತು ಹೇಮಂತ್ ಎಂಬ ಇಬ್ಬರು ಹಿಂದೂ ಯುವಕರು ಬೈಕ್ ಸ್ಕಿಡ್ ಆಗಿ ರಸ್ತೆಗೆಸೆಯಲ್ಪಟ್ಟಿದ್ದರು.
ಮೊಹಿದೀನ್ ಬಾವ ಅವರು ತಕ್ಷಣ ಕಾರು ನಿಲ್ಲಿಸದಿರುತ್ತಿದ್ದರೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಬಸ್ ಇವರ ಮೇಲೆ ಹರಿಯುವ ಭಾರೀ ಅಪಾಯ ತಪ್ಪಿದೆ.
ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುತ್ತಿರುವ ಡಾ.ಬಿ.ಎ.ಮೊಹಿದೀನ್ ಬಾವ ಸೇವೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿನಂದನೆ ವ್ಯಕ್ತವಾಗಿದೆ.
Kshetra Samachara
16/08/2021 09:15 pm