ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮೊಟ್ಟೆ ಹಗರಣದ ತನಿಖೆ ಮಾಡಿ: ನಮ್ಮ ಅನುದಾನ ಬಿಡುಗಡೆಗೊಳಿಸಿ:ಅಂಗನವಾಡಿ ನೌಕರರು

ಮಣಿಪಾಲ: ಅಂಗನವಾಡಿ ನೌಕರರು ಇವತ್ತು ಬೀದಿಗಿಳಿದು ಪ್ರತಿಭಟನೆ ನಡೆಸಿದರು.ಮುಖ್ಯವಾಗಿ ಮೊಟ್ಟೆ ಹಗರಣದ ತನಿಖೆ ಮಾಡಬೇಕು ಮತ್ತು ಅನುದಾನ ಬಿಡುಗಡೆ ಮಾಡಬೇಕು ಎಂಬ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯ ಅಂಗನವಾಡಿ ನೌಕರರ ಸಂಘದ ಆಶ್ರಯದಲ್ಲಿ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಶಿಫಾರಸ್ಸು ಮಾಡಿರುವ 339.48 ಲಕ್ಷ ಅನುದಾನ ಬಿಡುಗಡೆ ಮಾಡಬೇಕು. ಜೊತೆಗೆ ಈ ಹಿಂದೆ ಇಲಾಖೆಯ ಸಚಿವರಿಂದಲೇ ಆಗಿರುವ ಮೊಟ್ಟೆ ಹಗರಣದ ಬಗ್ಗೆ ತನಿಖೆ ಆಗಬೇಕು ಎಂದು ಪ್ರತಿಭಟನಾ ನಿರತ ನೌಕರರು ಆಗ್ರಹಿಸಿದರು. ಇನ್ನು ಕೊರೋನಾ ಸಂದರ್ಭದಲ್ಲಿ ನಿಧನರಾದ ಕುಟುಂಬದ ಸದಸ್ಯರಿಗೆ ಕಾರ್ಯಕರ್ತೆ ಅಥವಾ ಸಹಾಯಕಿ ಹುದ್ದೆ ಕೊಡಬೇಕು , ಕೊರೋನಾದಿಂದ ಮೃತಪಟ್ಟರೆ ಅಂತಹ ನೌಕರರಿಗೆ ತಕ್ಷಣ 30 ಲಕ್ಷ ಪರಿಹಾರ ಧನ ಒದಗಿಸಬೇಕು. ಹೀಗೆ ಅನೇಕ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಿದರು.

Edited By : Nagesh Gaonkar
Kshetra Samachara

Kshetra Samachara

16/08/2021 05:48 pm

Cinque Terre

8.71 K

Cinque Terre

2

ಸಂಬಂಧಿತ ಸುದ್ದಿ