ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಯಾವುದೇ ಟೀಕೆಗಳು ಎಲ್ಲೆಯನ್ನು ಮೀರಬಾರದು: ಸಚಿವ ಸುನಿಲ್ ಕುಮಾರ್

ಉಡುಪಿ: ಸಿಟಿ ರವಿ -ಪ್ರಿಯಾಂಕ ಖರ್ಗೆ ಜಟಾಪಟಿ ವಿಚಾರವಾಗಿ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಇಂಧನ ,ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ , ಯಾವುದೇ ಟೀಕೆಗಳು ಎಲ್ಲೆಯನ್ನು ಮೀರಬಾರದು. ಟೀಕಿಸುವಾಗ ಬಳಸುವ ಶಬ್ದ ಪ್ರಯೋಗಗಳನ್ನು ಜನ ಗಮನಿಸುತ್ತಾರೆ. ಮಾತಿನಿಂದ ನಮ್ಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ‌ ಎಂದು ಹೇಳಿದ್ದಾರೆ.

ವಾಜಪೇಯಿ ವ್ಯಕ್ತಿತ್ವ ಯಾವ ರೀತಿಯದ್ದು ಎಂಬುದು ಎಲ್ಲರಿಗೂ ಗೊತ್ತಿದೆ..ಅಜಾತಶತ್ರು ಎಂದು ಅವರೇ ಅವರನ್ನು ಕರೆಸಿಕೊಂಡದ್ದಲ್ಲ.

ಜನ ಅವರನ್ನು ಅಜಾತಶತ್ರು ಎಂದು ಕರೆದರು.ವಾಜಪೇಯಿ ಬಗ್ಗೆ ಮಾತನಾಡಿದರೆ ಅವರ ವ್ಯಕ್ತಿತ್ವ ತೋರಿಸುತ್ತದೆ.ವಾಜಪೇಯಿಗೆ ಇದರಿಂದ ಯಾವುದೇ ನಷ್ಟವಿಲ್ಲ. ಟೀಕಿಸುವ ಪ್ರತಿಯೊಬ್ಬರಿಗೂ ಈ ಮಾತು ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.

Edited By : Shivu K
Kshetra Samachara

Kshetra Samachara

15/08/2021 11:21 am

Cinque Terre

5.94 K

Cinque Terre

2

ಸಂಬಂಧಿತ ಸುದ್ದಿ