ಉಡುಪಿ: ಉಡುಪಿ ಪ್ರವಾಸದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಇಂದು ರಾತ್ರಿ
ಶ್ರೀಕೃಷ್ಣನ ದರ್ಶನ ಪಡೆದರು. ದರ್ಶನದ ಬಳಿಕ ಪರ್ಯಾಯ ಶ್ರೀಗಳ ಜೊತೆ ಸಮಾಲೋಚನೆ ನಡೆಸಿ ಶ್ರೀಗಳ ಆಶೀರ್ವಾದ ಪಡೆದರು. ಬಳಿಕ ಪರ್ಯಾಯ ಮಠಾಧೀಶರು ಮುಖ್ಯಮಂತ್ರಿಗಳಿಗೆ ಗೌರವ ಸಮರ್ಪಣೆ ಮಾಡಿದರು.
ಭೇಟಿ ವೇಳೆ ಮುಖ್ಯಮಂತ್ರಿಗಳ ಜೊತೆ ಸಚಿವರು ,ಜನಪ್ರತಿನಿಧಿಗಳ ದಂಡೇ ಇತ್ತು.ಅಪರಾಹ್ನದ ನಂತರ ಎಡೆಬಿಡದ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಭಾಗವಹಿಸಿದ್ದರು.
ನಾನೊಬ್ಬ ಶ್ರೀಕೃಷ್ಣನ ಭಕ್ತ ,ಮಠಕ್ಕೆಂದೇ ಉಡುಪಿಗೆ ಬರುತ್ತಿದ್ದೆ ಎಂದು ಭಾವುಕರಾಗಿದ್ದರು. ಮುಖ್ಯಮಂತ್ರಿಗಳು ಇವತ್ತು
ಉಡುಪಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ.
Kshetra Samachara
12/08/2021 10:38 pm