ಉಡುಪಿ: ಬಹಳ ದೊಡ್ಡ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳು ನನಗೆ ಕೊಟ್ಟಿದ್ದಾರೆ.ಪಕ್ಷ ನನಗೆ ಶಾಸಕನಾಗಿ ಜವಾಬ್ದಾರಿ ನೀಡಿತ್ತು. ಈಗ ಮುಖ್ಯಮಂತ್ರಿಗಳು ಅದಕ್ಕಿಂತ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾಗಿ ನಿಯುಕ್ತಿಗೊಂಡ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು ಈ ಮೊದಲು ಯಡಿಯೂರಪ್ಪನವರು, ಡಿಕೆ ಶಿವಕುಮಾರ್, ಶೋಭಾ ಕರಂದ್ಲಾಜೆಯವರು ನಿರ್ವಹಿಸಿದಂತಹ ಇಂಧನ ಖಾತೆ ನನಗೆ ಸಿಕ್ಕಿದೆ. ಈ ಜವಾಬ್ದಾರಿಯನ್ನು ಸಮರ್ಪಕವಾಗಿ ,ಹೊಸತನದೊಂದಿಗೆ ನಿರ್ವಹಿಸುತ್ತೇನೆ. ಇಲಾಖೆಯ ತಜ್ಞರು ಮತ್ತು ಹಿರಿಯರ ಸಲಹೆ-ಸೂಚನೆಯೊಂದಿಗೆ ಖಾತೆಯನ್ನು ನಿರ್ವಹಿಸುತ್ತೇನೆ ಎಂದು ಸುನಿಲ್ ಕುಮಾರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
Kshetra Samachara
07/08/2021 01:20 pm