ಮಂಗಳೂರು: ಲಾಕ್ ಡೌನ್ ಸಂದರ್ಭ ಮನೆಯಲ್ಲಿದ್ದರೂ ತುಳು, ಕೊಂಕಣಿ, ಬ್ಯಾರಿ ಅಕಾಡೆಮಿ ಅಧ್ಯಕ್ಷರುಗಳು ಲಕ್ಷಾಂತರ ರೂ. ಮಾಸಿಕ ಭತ್ಯೆ ಪಡೆದು ವಂಚನೆ ಮಾಡಿದ್ದಾರೆಂದು ಸಾಹಿತಿ ಡಾ.ಅರವಿಂದ ಶ್ಯಾನಭಾಗ್ ಆರೋಪಿಸಿದ್ದಾರೆ.
ಡಾ.ಅರವಿಂದ ಶ್ಯಾನಭಾಗ್ ಅವರು ಮಾಹಿತಿ ಹಕ್ಕಿನಡಿಯಲ್ಲಿ ಅಕಾಡೆಮಿ ಅಧ್ಯಕ್ಷರುಗಳ ಪ್ರಯಾಣ ಭತ್ಯೆಗಳ ದಾಖಲೆಗಳನ್ನು ಪಡೆದು ಬಹಿರಂಗ ಪಡಿಸಿದ್ದಾರೆ. ಈ ಮೂಲಕ ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜಗದೀಶ್ ಪೈಯವರಿಂದ ಸರಕಾರಕ್ಕೆ ವಂಚನೆಯಾಗಿದೆ. ಈ ಮೂಲಕ ಅವರು ಪ್ರತಿ ತಿಂಗಳು 30-40 ಸಾವಿರ ರೂ. ಮಾಸಿಕ ಪ್ರಯಾಣದ ಭತ್ಯೆ ಪಡೆದಿದ್ದಾರೆಂದು ಅವರು ಆರೋಪಿಸಿದ್ದಾರೆ.
ಲಾಕ್ ಡೌನ್ ನಲ್ಲಿ ಕಾರ್ಯಕ್ರಮಗಳಿಗೆ ನಿರ್ಬಂಧನೆ ಇದ್ದರೂ, ಕಾರ್ಯಕ್ರಮ ಆಯೋಜನೆಯ ದಾಖಲೆ ಸೃಷ್ಟಿ ಮಾಡಿ ಹಣ ಪಡೆದಿದ್ದಾರೆ. ಈ ಮೂಲಕ ಎಲ್ಲರೂ 2-3 ಲಕ್ಷ ರೂ. ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ ಎಂದು ಡಾ.ಅರವಿಂದ ಶಾನಭಾಗ್ ಆರೋಪಿಸಿದ್ದಾರೆ.
Kshetra Samachara
06/08/2021 08:36 pm