ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಮರವಂತೆ ಗ್ರಾಮ ಪಂಚಾಯಿತಿ :2021-22 ಸಾಲಿನ ಮೊದಲ ಗ್ರಾಮ ಸಭೆ

ಬೈಂದೂರು : ಬೈಂದೂರು ತಾಲ್ಲೂಕು ಮರವಂತೆ ಗ್ರಾಮ ಪಂಚಾಯಿತಿಯ 2021-22 ನೇ ಸಾಲಿನ ಮೊದಲನೇ ಸುತ್ತಿನ ಗ್ರಾಮಸಭೆ ಇಂದು ಮರವಂತೆ ಗ್ರಾಮ ಪಂಚಾಯಿತಿನ ಸಭಾಂಗಣದಲ್ಲಿ ನಡೆಯಿತು .

ಮೊದಲ ಸುತ್ತಿನ ಗ್ರಾಮಸಭೆಯ ಅಧ್ಯಕ್ಷತೆಯನ್ನು ಮರವಂತೆ ಗ್ರಾಮ ಪಂಚಾಯಿತ ಅಧ್ಯಕ್ಷರಾದ ರುಕ್ಮಿಣಿ ಅವರು ವಹಿಸಿದರು .

ಸಭೆಯಲ್ಲಿ ಕೃಷಿ ಇಲಾಖೆ. ತೋಟಗಾರಿಕೆ .ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ .ಅರಣ್ಯ ಇಲಾಖೆ .ಆರೋಗ್ಯ ಇಲಾಖೆ. ಹಾಗೂ ವಿವಿಧ ಇಲಾಖೆಗಳು ಸಭೆಯಲ್ಲಿ ಹಾಜರಿದ್ದು ಇಲಾಖೆಯ ಸಂಬಂಧಪಟ್ಟ ಕಾನೂನು ಹಾಗೂ ಸರಕಾರದ ಅನುದಾನಗಳನ್ನು ಸಮರ್ಪಕವಾಗಿ ಜನರಿಗೆ ಹೇಳಿದರು .

ನೋಡಲ್ ಅಧಿಕಾರಿ ಕಿರಿಮಂಜೇಶ್ವರ ವಲಯ ಪಶು ವೈದ್ಯಾಧಿಕಾರಿ ಡಾ!ನಾಗರಾಜ ಖಾರ್ವಿ ಮರವಂತೆ ಮಾತನಾಡಿ ಗ್ರಾಮದ ಅಭಿವೃದ್ಧಿಯಲ್ಲಿ ಸ್ವಂತ ಸಂಪನ್ಮೂಲ ಕ್ರೋಡೀಕರಣಕ್ಕೆ ಗ್ರಾಮಸ್ಥರ ಸಹಕಾರ ಅತೀ ಅಗತ್ಯ ಎಂದು ಹೇಳಿದರು .ಗ್ರಾಮ ಪಂಚಾಯಿತಿ ಕಾರ್ಯದರ್ಶಿ ದಿನೇಶ ಶೇರುಗಾರ ಗಂಗೊಳ್ಳಿ ವಾರ್ಡ್ ಸಭೆಯ ವರದಿ ಮಂಡಿಸಿದರು .

ಹೌದು ಗ್ರಾಮ ಸಭೆಯ ಮಧ್ಯದಲ್ಲಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಸಣ್ಣಪುಟ್ಟ ವಿಷಯಕ್ಕೆ ಮಾತಿನ ಚಕಮಕಿ ನಡೆಯಿತು ಆ ಸಮಯದಲ್ಲಿ ಸಭೆಯ ನೋಡಲ್ ಅಧಿಕಾರಿ ಡಾ !ನಾಗರಾಜ್ ಖಾರ್ವಿ ಸಮಸ್ಯೆಗಳ ವಿಷಯದಲ್ಲಿ ಕಾನೂನಿನ ಅರಿವು ಗ್ರಾಮಸ್ಥರಿಗೆ ಸಮರ್ಪಕವಾಗಿ ತಿಳಿ ಹೇಳಿದರು ಹಾಗೆಯೇ ಗ್ರಾಮಸ್ಥರು ಕಾನೂನಿನ ಮಾಹಿತಿಗೆ ಜನರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮರವಂತೆ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಮರವಂತೆ ಗ್ರಾಮದ ಹಿರಿಯರು ಆದ ಜನಾರ್ಧನ್ ಮಾಸ್ಟರ್ ಗ್ರಾಮ ಪಂಚಾಯಿತಿನ ಸದಸ್ಯರಿಗೆ ಕೆಲವೊಂದು ಕಿವಿಮಾತು ಹೇಳಿ ಗ್ರಾಮಸಭೆ ಯಶಸ್ವಿಗೊಳಿಸಿದರು .

Edited By : Manjunath H D
Kshetra Samachara

Kshetra Samachara

06/08/2021 06:20 pm

Cinque Terre

10.56 K

Cinque Terre

0