ಮಂಗಳೂರು: ನಗರದ ಯೆನೆಪೊಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಅವರನ್ನು ಪುದುಚೇರಿಯ ಮಾಜಿ ಸಿಎಂ ನಾರಾಯಣ ಸ್ವಾಮಿ ಅವರು ಇಂದು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ನಿನ್ನೆ ಆಸ್ಕರ್ ಫರ್ನಾಂಡೀಸ್ ಆರೋಗ್ಯದಲ್ಲಿ ಏಕಾಏಕಿ ಕೊಂಚ ಏರುಪೇರು ಕಂಡಿತ್ತು. ಅವರಿಗೆ ಸ್ವಲ್ಪ ಚಳಿ ಹಾಗೂ ಜ್ವರದ ರೀತಿ ಕಂಡು ಬಂದಿತ್ತು. ಇಂದು ಬೆಳಗ್ಗೆ ಬಿಪಿಯೂ ಲೋ ಆಗಿತ್ತು. ತಕ್ಷಣ ವೈದ್ಯರು ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದು, ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿದೆ. ಈಗ ಆರೋಗ್ಯದಲ್ಲಿ ಸ್ಥಿರತೆ ಕಂಡು ಬಂದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಯೋಗ ಮಾಡಿ ಬಿದ್ದು ತಲೆಗೆ ಏಟು ಮಾಡಿದ ಬಳಿಕ ಅವರು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಅವರನ್ನು ಪುದುಚೇರಿಯ ಮಾಜಿ ಸಿಎಂ ನಾರಾಯಣ ಸ್ವಾಮಿಯವರು ಮಾಡಿ ಆರೋಗ್ಯ ವಿಚಾರಣೆ ಮಾಡಿದರು.
Kshetra Samachara
06/08/2021 01:42 pm