ಹೆಬ್ರಿ: ಪ್ರಥಮ ಬಾರಿಗೆ ಕಾರ್ಕಳ ಕ್ಷೇತ್ರದ ಶಾಸಕ ವಿ ಸುನಿಲ್ ಕುಮಾರ್ ಬುಧವಾರ ರಾಜಭವನದ ಗಾಜಿನ ಮನೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಇದೇ ಸಂತೋಷದಲ್ಲಿ ಹೆಬ್ರಿ ಪೇಟೆಯಲ್ಲಿ ಬಿಜೆಪಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿತಿಂಡಿ ಹಂಚಿ ಸಂಭ್ರಮಿಸಿದರು. 4ಬಾರಿ ಶಾಸಕರಾಗಿ ಸ್ವಕ್ಷೇತ್ರದಲ್ಲಿ ಅವರ ಕಾರ್ಯವೈಖರಿ ಬಗ್ಗೆ ಉತ್ತಮ ಮಾತು ಕೇಳಿ ಬಂದಿದೆ. ಇದೀಗ ಸಚಿವರಾಗಿರುವುದು ಸಹಜವಾಗಿ ಕಾರ್ಕಳ ಕ್ಷೇತ್ರದ ಅಭಿಮಾನಿಗಳಿಗೆ ಸಂತಸ ತಂದಿದೆ.
ಪಕ್ಷದ ಪ್ರಮುಖರಾದ ಗುರುದಾಸ್ ಶೆಣೈ, ಜ್ಯೋತಿ ಹರೀಶ್ ಸತೀಶ್ ಪೈ, ಸುಧಾಕರ್ ಎಚ್ ಕೆ. ಸಿ .ಎಂ ಪ್ರಸನ್ನ ಶೆಟ್ಟಿ, ಸುಧಾಕರ್ ಹೆಗ್ಡೆ, ಡಿ .ಜೆ ರಾಘವೇಂದ್ರ, ಹೆಬ್ರಿ ಗ್ರಾಪಂ ಅಧ್ಯಕ್ಷೆ ಮಾಲತಿ ಹಾಗೂ ವಿವಿಧ ಗ್ರಾಮ ಪಂಚಾಯತ್ ನ ಅಧ್ಯಕ್ಷರುಗಳು ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು
Kshetra Samachara
04/08/2021 06:47 pm