ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನನ್ನ ಪರವಾಗಿ ಪ್ರತಿಭಟನೆ ಮಾಡಿದರೆ ನಾನು ಸಂತೋಷಪಡಲ್ಲ! ಮಂತ್ರಿಸ್ಥಾನ ವಂಚಿತ ಹಾಲಾಡಿ ಪ್ರತಿಕ್ರಿಯೆ

ಕುಂದಾಪುರ: ಕುಂದಾಪುರದ ಐದು ಬಾರಿಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಸಚಿವ ಸ್ಥಾನದಿಂದ ಹೊರಗಿಡಲಾಗಿದೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ.

ನನ್ನದು ಏನಿದ್ದರೂ ಮೌನ ವೃತ. ಆಸೆಯೇ ದುಖಕ್ಕೆ ಕಾರಣ ಎಂದು ಬುದ್ದ ಹೇಳಿದ್ದಾನೆ.ನಾನು ಬರುವಾಗ ಏನನ್ನೂ ತಂದಿಲ್ಲ.ನಾನು ಹೋಗುವಾಗ ಬರಿಗೈಲಿ ಹೋಗುವವನು.ನನ್ನ ಪರವಾಗಿ ಪ್ರತಿಭಟನೆ ಮಾಡುವುದು ಧರ್ಮವಲ್ಲ.ಸಮಾಜದ ಒಳಿತಿಗಾಗಿ ಮಾತ್ರ ಪ್ರತಿಭಟನೆ ಮಾಡಬೇಕು.

ಸರ್ಕಾರ ದುರಾಡಳಿತ ಮಾಡಿದಾಗ ಮಾತ್ರ ಪ್ರತಿಭಟನೆ ಮಾಡಬೇಕು. ಮಂತ್ರಿಸ್ಥಾನಕ್ಕಾಗಿ ಪ್ರತಿಭಟಿಸುವುದು ಗೌರವ ಲಕ್ಷಣ ಅಲ್ಲ.ನನ್ನ ಪರವಾಗಿ ಪ್ರತಿಭಟನೆ ಮಾಡಿದರೆ ನಾನು ಸಂತೋಷಪಡಲ್ಲ. ಪ್ರತಿಭಟನೆ ಏನಿದ್ದರೂ ಮತದಲ್ಲಿ ತೋರಿಸಬೇಕು.ಇವತ್ತು ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.ಮುಂದಿನ ನಿರ್ಧಾರಗಳನ್ನು ಪರಮಾತ್ಮನೇ ಬಲ್ಲ.ಒಂದು ಬಾರಿ ನನ್ನನ್ನು ಪ್ರಮೋಶನ್ ಗೆ ಕರೆದು ಡಿಮೋಶನ್ ಮಾಡಿದ್ರು ಎಂದು ಹೇಳಿದ್ದಾರೆ!

Edited By : Nagesh Gaonkar
Kshetra Samachara

Kshetra Samachara

04/08/2021 06:10 pm

Cinque Terre

11.15 K

Cinque Terre

1