ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಪಪ್ರಚಾರದಿಂದ ನಮ್ಮ ಮನಸಿಗೆ ನೋವಾಗಿದೆ: ಪಬ್ಲಿಕ್ ನೆಕ್ಸ್ಟ್ ಗೆ ನೂತನ ಸಚಿವ ಕೋಟ ಪತ್ನಿ ಪ್ರತಿಕ್ರಿಯೆ

ಕೋಟ: ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮೂರನೇ ಬಾರಿಗೆ ಮಂತ್ರಿಸ್ಥಾನ ಒಲಿದು ಬಂದಿದೆ. ಹೀಗಾಗಿ ಅವರ ಮನೆಯಲ್ಲಿ ಸಹಜವಾಗಿಯೇ ಸಂಭ್ರಮ ಮನೆ ಮಾಡಿದೆ. ಕೋಟಾದ ಮನೆಯಲ್ಲಿರುವ ಶ್ರೀನಿವಾಸ ಪೂಜಾರಿ ಅವರ ಪತ್ನಿ ಶಾಂತಾ ಅವರು ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ, ಅವರು ಸಚಿವರಾಗಿರುವುದು ತುಂಬಾ ಖುಷಿ ಕೊಟ್ಟಿದೆ. ಅವರೊಬ್ಬ ಶ್ರಮಜೀವಿ. ಬೆಳಗ್ಗಿನಿಂದ ಸಂಜೆ ತನಕ ಜನರ ಜೊತೆ ಇರುತ್ತಾರೆ. ಬೆಳಿಗ್ಗೆ ಹೋದರೆ ಅವರು ಮನೆಗೆ ಬರೋದು ರಾತ್ರಿಯೇ. ಹೆಂಡತಿ ಮಕ್ಕಳ ಜೊತೆ ಅವರು ಇರುವುದೇ ಇಲ್ಲ. ಅವರ ಕೆಲಸವೂ ಹಾಗಿದೆ ಎಂದು ತಮ್ಮ ಗಂಡನ ಬಗ್ಗೆ ಹೇಳಿದ್ದಾರೆ.

ಇದೇ ವೇಳೆ ಬೇಸರ ತೋಡಿಕೊಂಡ ಶಾಂತಾ ಅವರು ,ಇತ್ತೀಚೆಗೆ ನಾವು ಸಾಲ ಮಾಡಿ ಒಂದು ಮನೆ ಕಟ್ಟಿ ಸುತ್ತಿದ್ದೇವೆ. ಈ ಮೊದಲು 13 ಸೆಂಟ್ಸ್ ಜಾಗ ಖರೀದಿ ಮಾಡಿದ್ದು, ಅದರಲ್ಲೂ ಕೂಡ ಸಾಲ ಇದೆ. ಈಗ ಸಾಲ ಮಾಡಿ ಮನೆ ಕಟ್ಟಿಸುತ್ತಿದ್ದೇವೆ. ಆದರೆ ಕೆಲವರು ಕೋಟ್ಯಂತರ ರುಪಾಯಿಯ ಮನೆ ಎಂದು ಅಪಪ್ರಚಾರ ಮಾಡಿದರು.ಇದರಿಂದ ನಮ್ಮ ಮನಸ್ಸಿಗೆ ತುಂಬಾ ನೋವಾಗಿದೆ. ನಾವು ಶ್ರೀಮಂತರಲ್ಲ. ಬಡತನದಲ್ಲೇ ಬೆಳೆದು ಬಂದವರು. ಜನರ ಸಮಸ್ಯೆ, ನೋವು ನಮಗೆ ತಿಳಿದಿದೆ.ಇಷ್ಟಿದ್ದರೂ ಕೆಲವರು ಅಪಪ್ರಚಾರ ಮಾಡಿದ್ದು ಬೇಸರವಾಗಿದೆ ಎಂದು ಶಾಂತಾ ಹೇಳಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

04/08/2021 04:23 pm

Cinque Terre

19.39 K

Cinque Terre

3