ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬಿಜೆಪಿ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಮನಪಾ ವಾರ್ಡ್ ಸಮಿತಿಯನ್ನು ದುರುಪಯೋಗ ಪಡಿಸುತ್ತಿದ್ದಾರೆ: ಮಾಜಿ ಶಾಸಕ ಜೆ.ಆರ್.ಲೋಬೊ‌ ಆರೋಪ

ಮಂಗಳೂರು: ಮಹಾನಗರ ಪಾಲಿಕೆಯ ವಾರ್ಡ್ ಸಮಿತಿಯ ಸದಸ್ಯರ ನೇಮಕಾತಿಗೆ 1,278 ಅರ್ಜಿ ಬಂದಿದ್ದು, ಇದೀಗ ಮನಪಾ ಆಯುಕ್ತರು 60 ವಾರ್ಡ್ ಗಳ 600 ಸದಸ್ಯರ ತಾತ್ಕಾಲಿಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ‌. ಈ ಪಟ್ಟಿಯಲ್ಲಿನ ಶೇ‌. 90ರಷ್ಟು ಮಂದಿ ಸದಸ್ಯರು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಇದು ಸಂಪೂರ್ಣ ಕಾನೂನು ಉಲ್ಲಂಘನೆಯಾಗಿದೆ. ಬಿಜೆಪಿ ನಾಯಕರು ತಮ್ಮ ಸ್ವಾರ್ಥಕ್ಕಾಗಿ ವಾರ್ಡ್ ಸಮಿತಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ‌ ಆರೋಪಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಮಂಗಳೂರು ಮನಪಾ ಆಯುಕ್ತರು ಓರ್ವ ಐಎಎಸ್ ಅಧಿಕಾರಿಯಾಗಿ ಸ್ವತಂತ್ರವಾಗಿ ಕೆಲಸ ಮಾಡುವ ಬದಲು ಬಿಜೆಪಿ ಪಕ್ಷದ ಅಡಿಯಾಳಾಗಿ ಕೆಲಸ ಮಾಡುತ್ತಿರುವಂತೆ ತೋರುತ್ತಿದೆ ಎಂದು ಆಗ್ರಹಿಸಿದ್ದಾರೆ.

ಮನಪಾ ವಾರ್ಡ್ ಸಮಿತಿಯ ಸದಸ್ಯತ್ವರಾಗುವವರು ಯಾವುದೇ ರಾಜಕೀಯ ಪಕ್ಷಗಳಲ್ಲಿ ಗುರುತಿಸಿರಬಾರದು, ಯಾವುದೇ ಪಕ್ಷದ ಸಕ್ರಿಯ ಸದಸ್ಯರಾಗಿರಬಾರದು. ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸಬಾರದು. ರಾಜಕೀಯ ಒಡನಾಟ ಇಲ್ಲದವರು, ಸರಕಾರೇತರ ಸಂಸ್ಥೆಗಳು, ಜನಸಾಮಾನ್ಯರು ಮಾತ್ರ ಅರ್ಜಿ ಹಾಕಬಹುದು. ಆದರೆ ಇದೀಗ ಆಯುಕ್ತರು ಆಕ್ಷೇಪಣೆ ಸಲ್ಲಿಸಲು ಬಿಡುಗಡೆ ಮಾಡಿರುವ ತಾತ್ಕಾಲಿಕ ಪಟ್ಟಿಯಲ್ಲಿ ಶೇ.90 ರಷ್ಟು ಮಂದಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ‌.

ಹಾಗಾದರೆ ಉಳಿದ 600 ಮಂದಿ ಅರ್ಜಿದಾರರ ಅಭಿಪ್ರಾಯ ಹಾಗೂ ಅರ್ಹತೆಯನ್ನು ರುಜುವಾತು ಪಡಿಸಲು ಯಾಕಾಗಿ ಅವಕಾಶ ನೀಡಿಲ್ಲ. ಆದ್ದರಿಂದ ತಕ್ಷಣ ಮನಪಾ ಆಯುಕ್ತರು ಇಡೀ ಪಟ್ಟಿಯನ್ನು ರದ್ದುಪಡಿಸಿ ಕಾನೂನಿನ ಚೌಕಟ್ಟಿನೊಳಗಿನ ಸದಸ್ಯರನ್ನು ಮಾತ್ರವೇ ವಾರ್ಡ್ ಸಮಿತಿಗೆ ಸೇರಿಸಬೇಕೆಂದು ಜೆ.ಆರ್.ಲೋಬೊ‌ ಆಗ್ರಹಿಸಿದರು.

Edited By : Shivu K
Kshetra Samachara

Kshetra Samachara

04/08/2021 02:28 pm

Cinque Terre

8.44 K

Cinque Terre

2

ಸಂಬಂಧಿತ ಸುದ್ದಿ