ಮುಲ್ಕಿ: ಕರಾವಳಿ ಜಿಲ್ಲೆಯಲ್ಲಿ ಯುವಕರನ್ನು ಸಂಘಟಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಇದ್ದುಕೊಂಡು ದೌರ್ಜನ್ಯವನ್ನು ವಿರೋಧಿಸಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದ ಹೋರಾಟಗಾರ ಬೊಂಡಾಲ ಜಗನ್ನಾಥ ಶೆಟ್ಟಿ ನಮ್ಮನ್ನು ಅಗಲಿ ಒಂಬತ್ತು ವರ್ಷವಾಯಿತು. ಆದರೆ ಅವರ ಧೈರ್ಯ ಮತ್ತು ಸಂಘಟನೆ ಶಕ್ತಿಗಳು ನಮಗೆ ಸ್ಫೂರ್ತಿ ಎಂದು ಕರ್ನಾಟಕ ರಾಜ್ಯ ಯುವ ಕಾಂಗ್ರೆಸಿನ ಪ್ರಧಾನ ಕಾರ್ಯದರ್ಶಿಯಾದ ಮೆರಿಲ್ ರೇಗೊ ನುಡಿದರು.
ಅವರು ಮುಲ್ಕಿ ಯುವ ಕಾಂಗ್ರೆಸ್ ವತಿಯಿಂದ ನಡೆದ ಬೊಂಡಾಲ ಜಗನ್ನಾಥ ಶೆಟ್ಟಿ ಅವರ ಸ್ಮರಣ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ್ ಕೋಟ್ಯಾನ್ ಅವರು ವಹಿಸಿದ್ದರು. ಕೆಪಿಸಿಸಿ ಕೊ-ಆರ್ಡಿನೇಟರ್ ವಸಂತ ಬರ್ನಾಡ್ ಮಾತನಾಡಿ , ಬೊಂಡಾಲ ಜಗನ್ನಾಥ ಶೆಟ್ಟಿ ಅವರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ಕೆಲಸ ಮಾಡಿದ ತೃಪ್ತಿ ನನಗಿದೆ . ಮಿಥುನ ರೈ ಅಂತಹ ಧೀಮಂತ ಯುವ ನಾಯಕರನ್ನು ಬೆಳೆಸಿದ ಬೊಂಡಾಲ ಜಗನ್ನಾಥ ಶೆಟ್ಟಿ ಅವರು ನಿಜವಾಗಿಯೂ ಮೇರು ವ್ಯಕ್ತಿತ್ವ ಉಳ್ಳವರು ಎಂದರು.
ಕಾರ್ಯಕ್ರಮದಲ್ಲಿಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಪ್ರವೀಣ್ ಕುಮಾರ್ ಬೊಳ್ಳೂರು, ಮತ್ತಿತರರು ಉಪಸ್ಥಿತರಿದ್ದರು.
ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ್ ಸ್ವಾಗತಿಸಿ, ಉಪಾಧ್ಯಕ್ಷ ರಿತೇಶ್ ಸಾಲ್ಯಾನ್ ಸಸಿಹಿತ್ಲು ವಂದಿಸಿದರು.
Kshetra Samachara
01/08/2021 09:16 pm