ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸಭೆ ಮೂಡಬಿದಿರೆಯ ಕಾಮಧೇನು ಸಭಾಭವನದಲ್ಲಿ ನಡೆಯಿತು.
ಮುಲ್ಕಿ-ಮೂಡಬಿದ್ರೆ ಕ್ಷೇತ್ರ ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಪಕ್ಷವನ್ನು ಸಂಘಟನೆಗಳ ಮೂಲಕ ಬಲಪಡಿಸುವುದರ ಜೊತೆಗೆ ರಾಜ್ಯ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಕಾರ್ಯಕರ್ತರು ತಿಳಿಸುವ ಪ್ರಯತ್ನ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ್ಯಕ್ಷ ಸುನೀಲ್ ಆಳ್ವ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಗುರುದತ್ ನಾಯಕ್, ಪ್ರಮುಖರಾದ ಈಶ್ವರ್ ಕಟೀಲ್, ಸತೀಶ್ ಕುಂಪಲ, ಕಸ್ತೂರಿ ಪಂಜ ಹಾಗೂ ಅಶ್ವತ್ ಪಣಪಿಲ ಉಪಸ್ಥಿತರಿದ್ದರು.
Kshetra Samachara
30/07/2021 01:55 pm