ಮಂಗಳೂರು: ಗಗನಮುಖಿ ತೈಲ ಬೆಲೆ; ಕಾಂಗ್ರೆಸ್ ನಿಂದ " 100 ನಾಟೌಟ್" ಘೋಷಣೆ!

ಮಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರಕಾರದ ವಿರುದ್ಧ ದ.ಕ. ಜಿಲ್ಲಾ ಕಾಂಗ್ರೆಸ್ ನಿಂದ
ನಗರದ ಕೆಪಿಟಿ ಪೆಟ್ರೋಲ್ ಪಂಪ್ ಎದುರು ವಿನೂತನ ಪ್ರತಿಭಟನೆ ನಡೆಯಿತು.

"100 ನಾಟೌಟ್" ಹೆಸರಲ್ಲಿ ನಡೆದ ಪ್ರತಿಭಟನೆಯಲ್ಲಿ ಜಾಗಟೆ ಬಾರಿಸು ಇಂಧನ ತೈಲ ಬೆಲೆ ಏರಿಕೆ ಖಂಡಿಸಲಾಯಿತು. ಇದೇ ವೇಳೆ "100 ನಾಟೌಟ್" ಕೇಕ್ ಕತ್ತರಿಸಿ ವ್ಯಂಗ್ಯವಾಡಿದರು. ಭಿತ್ತಿ ಫಲಕಗಳನ್ನು ಪ್ರದರ್ಶಿಸಿದ ಪ್ರತಿಭಟನಾಕಾರರು ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಮಾಜಿ ಸಚಿವ ಬಿ.ರಮಾನಾಥ ರೈ, ದ.ಕ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಎಂಎಲ್ ಸಿ ಐವನ್ ಡಿಸೋಜ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮುಖಂಡ ಮಿಥುನ್ ರೈ, ಮಾಜಿ ಶಾಸಕರಾದ ಮೊಯ್ದಿನ್ ಬಾವ, ಜೆ. ಆರ್.ಲೋಬೊ, ಶಶಿಧರ್ ಹೆಗ್ಡೆ, ಸದಾಶಿವ ಉಳ್ಳಾಲ್, ಪಿ‌.ವಿ.ಮೋಹನ್, ವಿನಯ್ ರಾಜ್ ಮತ್ತಿತರರು ಭಾಗವಹಿಸಿದ್ದರು.

Kshetra Samachara

Kshetra Samachara

14 days ago

Cinque Terre

4.43 K

Cinque Terre

2

  • B.R.NAYAK
    B.R.NAYAK

    ಕೊನೆಗೂ ,ಮೋದಿಯವರು ಅನುಸರಿಸುವ,ಜಾಗಟೆ,ದೀಪ ಹಚ್ಚಿ ಜಾಗೃತಿ ಗೊಳಿಸುವ ಶೈಲಿ ಯನ್ನು ಅಳವಡಿಸಿದ್ದು ದುರದೃಷ್ಟಕರ

  • KUDLADA BORI💖😘😋😋😋💖
    KUDLADA BORI💖😘😋😋😋💖

    illa illa naan kadime maadakilla