ಪೆಟ್ರೋಲ್ ,ಡೀಸೆಲ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ನಿಂದ ಪ್ರತಿಭಟನೆ

ಉಡುಪಿ: ಪೆಟ್ರೋಲ್ ,ಡೀಸೆಲ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ನಿಂದ ಉಡುಪಿಯಲ್ಲಿ ಪ್ರತಿಭಟನೆ ನಡೆಯಿತು.ಸರ್ವಿಸ್ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಭಾಗಿಯಾದರು. ಕೊರೋನಾ ಲಾಕ್ ಡೌನ್ ಸಂದರ್ಭದಲ್ಲೂ ಕೇಂದ್ರ ,ರಾಜ್ಯ ಸರಕಾರಗಳು ಜನ ವಿರೋಧಿ ನೀತಿ ಅನುಸರಿಸುತ್ತಿವೆ. ಸತತ ಬೆಲೆ ಏರಿಸುವ ಮೂಲಕ ಜನರ ಬದುಕಿನ ಮೇರೆ ಬರೆ ಎಳೆಯುತ್ತಿವೆ.ಯುಪಿಎ ಸರಕಾರ ಇದ್ದಾಗ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ನಾಯಕರು,ಈಗ ಇಂಧನ ,ದಿನಬಳಕೆ ವಸ್ತುಗಳ ನಿರಂತರ ಬೆಲೆ ಏರಿಕೆಯಾಗುತ್ತಿದ್ದರೂ ಮೌನಕ್ಕೆ ಶರಣಾಗಿದ್ದಾರೆ ಎಂದು ಕೇಂದ್ರ, ರಾಜ್ಯ ಸರಕಾರಗಳ ವಿರುದ್ಧ ಕಾಂಗ್ರೆಸ್ ಮುಖಂಡರು ವಾಗ್ದಾಳಿ ನಡೆಸಿದರು.ಸಾಮಾಜಿಕ ಅಂತರ ಕಾಪಾಡಿ , ಮಾಸ್ಕ್ ಧರಿಸಿ ಪ್ರತಿಭಟನೆ ನಡೆಯಿತು.ಮಾಜಿ ಸಚಿವ ವಿನಯಕುಮಾರ್ ಸೊರಕೆ ಸಹಿತ ಜಿಲ್ಲಾ ಮುಖಂಡರು ಇದರಲ್ಲಿ ಭಾಗಿಯಾದರು.

Kshetra Samachara

Kshetra Samachara

14 days ago

Cinque Terre

5.1 K

Cinque Terre

2

  • ✌️Ashwith✌️
    ✌️Ashwith✌️

    ಸಾವಿರಗಟ್ಟಲೆ ಜನ ರೈತ ಆಂದೋಲನದಲ್ಲಿ ಸೇರಿದ್ರು..ಅಲ್ಲಿ ಆಂದೋಲನ ಮಾಡುತ್ತಾ ಇನ್ನು ಇದ್ದರು ಇರಬಹ್ಡುದ್..ಅವರ ಆಂದೋಲನಕ್ಕೆ ಯಾವ ಬೆಲೆನು ಕೊಟ್ಟಿಲ್ಲ.ಇನ್ನು ಈ ಇದಕ್ಕೆ ಯಾವ ಬೆಲೆ ನೀಡುತ್ತಾರೆ ..ಈ ದಪ್ಪ ಚರ್ಮದವರು ...😅😂😭🙏♨️🔥

  • Rajesh
    Rajesh

    ye New India he.. dappa charmada government erovaga yaaru yene madidru ashthe. edke ennu court helidre yello 25 paisa kadme agbahudo yeno..