ಸುರತ್ಕಲ್: ಬೈಕಂಪಾಡಿ ಮಸೀದಿ ಆಡಳಿತ ವಿರುದ್ಧ ಆರೋಪ ಸುಳ್ಳು:ಅಬ್ದುಲ್ ನಾಸೀರ್

ಸುರತ್ಕಲ್: ಬೈಕಂಪಾಡಿ ಮೊಹಿಯುದ್ದೀನ್ ಜುಮ್ಮಾ ಮಸೀದಿಮುಸ್ಲಿಂ ಜಮಾತ್ನಲ್ಲಿ ನಮ್ಮ ಆಡಳಿತ ಅಧಿಕಾರ ಬಂದ ಮೇಲೆ ಪ್ರತಿಯೊಂದರ ಲೆಕ್ಕಪತ್ರಗಳು ಪಾರದರ್ಶಕವಾಗಿದ್ದು, ಕರ್ನಾಟಕ ವಕ್ಫ್ ಮಂಡಳಿಗೆ ಸಲ್ಲಿಸಲಾಗುತ್ತಿದೆ.ಜಮಾತ್ ಸದಸ್ಯರು ಯಾವುದೇ ಚರ್ಚೆ ಸಂವಾದಕ್ಕೆ ಬಂದರೂ ಆಡಳಿತ ಸಮಿತಿ ಬದ್ದವಾಗಿದೆ ಎಂದು ಜಮಾತ್ ಅಧ್ಯಕ್ಷ ಅಬ್ದುಲ್ ನಾಸೀರ್ ಲಕ್ಕೀಸ್ಟಾರ್ ಸುರತ್ಕಲ್ನಲ್ಲಿ ಬುಧವಾರ ಕರೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ನಮ್ಮ ಆಡಳಿತ ಸಮಿತಿಯು ರಾಜ್ಯ ವಕ್ಫ್ ಮಂಡಳಿಯಿಂದ ಅನುಮೋದಿತವಾಗಿದ್ದು, ಪ್ರತಿ ವರ್ಷ ಮಹಾಸಭೆ, ಮತ್ತು ಪ್ರತಿ 3 ವರ್ಷಕ್ಕೊಮ್ಮೆ ವಕ್ಫ್ ಬೈಲಾದ ನಿಯಮದ ಪ್ರಕಾರ ಹೊಸ ಚುನಾವಣೆ ನಡೆಯುತ್ತಾ ಬಂದಿದೆ. ಪ್ರಸಕ್ತ ಸಾಲಿನ ಮಹಾಸಭೆ ಎ.2ರಂದು ರಂದು ನಿಗದಿಯಾಗಿತ್ತು, ನಿಗದಿತ ಕೋರಂ ಇಲ್ಲದೆ ಎ.9ರಂದು ಮುಂದೂಡಲ್ಪಟ್ಟಿದೆ. ಇದಕ್ಕೆ ವಕ್ಫ್ ಅಧಿಕಾರಿ ವೀಕ್ಷಕರಾಗಿ ಬಂದಿರುವುದು ಯಾವುದೇ ತಪ್ಪಿಲ್ಲ.ಅವರ ಮೇಲಿನ ಆಪಾದನೆಯಲ್ಲಿ ಸತ್ಯಾಂಶವಿಲ್ಲ.

ನಮ್ಮ ಆಡಳಿತ ಸಮಿತಿ ಅಸ್ತಿತ್ವಕ್ಕೆ ಬರುವಾಗ, ನಮ್ಮ ಸಂಸ್ಥೆಯ ಅಧೀನದಲ್ಲಿರುವ ಅಡ್ಕ ಸಮುದಾಯ ಭವನದ ವಕ್ಫ್ ಪರಿಷತ್ನ ಸಾಲದ ಮೊತ್ತ 50 ಲಕ್ಷ ರೂ ಹಾಗೂ ಶೇಕಡಾ 5% ರಷ್ಟು ಸೇವಾ ಶುಲ್ಕ ಪಾವತಿಸಲು ಬಾಕಿಯಿತ್ತು. ಈ ಸಾಲ ಮೊತ್ತವನ್ನು ನಮ್ಮ ಸಮಿತಿಯು ಸಂಪೂರ್ಣವಾಗಿ ತೀರಿಸಿ ಸಂಸ್ಥೆಯನ್ನು ಸಾಲದಿಂದ ಮುಕ್ತಗೊಳಿಸಲಾಗಿದೆ.

ನಮ್ಮ ಆಡಳಿತಕ್ಕಿಂತ ಹಿಂದೆ ಇದ್ದ ಸಮಿತಿ ಅಧ್ಯಕ್ಷರು ಸೋದರರ ಹೆಸರಿನಲ್ಲಿ 27.53 ಹಣ ವರ್ಗಾವಣೆ, ಅಡ್ಕ ಸಮುದಾಯ ಭವನದ ನಿರ್ಮಾಣ ದರವನ್ನು ಮೌಲ್ಯಕ್ಕಿಂತ 21.43 ಲಕ್ಷ ರೂ. ಹೆಚ್ಚು ಮೌಲ್ಯ ಮಾಪನ ಮಾಡಿರುವುದರ ಬಗ್ಗೆ ನಾವು ತನಿಖೆಗೆ ಆಗ್ರಹಿಸಿದ ಮೇರೆಗೆ ಸಿಎಜಿ ತನಿಖೆಯಲ್ಲೂ ಅವ್ಯವಹಾರ ತಿಳಿದು ಬಂದ ಮೇರೆಗೆ ಇದೀಗ ಜಿಲ್ಲಾಧಿಕಾರಿಗಳಿಗೆ ವಸೂಲಾತಿಗೆ ವಕ್ಫ್ ಮಂಡಳಿ ಆದೇಶಿಸಿದೆ ಎಂದರು. ಇದೀಗ ಹೈಕೋರ್ಟ್ ಇದೀಗ ಎ.9ರಂದು ನಿಗದಿಯಾಗಿದ್ದ ಮಹಾಸಭೆಯನ್ನು ನಡೆಸಿ ಲೆಕ್ಕಪತ್ರ ಮಂಡನೆ ಮತ್ತು ಹೊಸ ಸಮಿತಿ ರಚನೆಗೆ ಅನುವು ಮಾಡಿಕೊಟ್ಟಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ನ್ಯಾಯಾವಾದಿ ಬಿ. ಮುಖ್ತಾರ್ ಅಹಮದ್, ಉಪಾಧ್ಯಕರಾದ ಚೈಬಾವ, ಕಾರ್ಯದರ್ಶಿ ಸೈದ್ದುದ್ದೀನ್, ಜೊತೆ ಕಾರ್ಯದರ್ಶಿ ಹಸನ್ ಶಮೀರ್, ಕೋಶಾಧಿಕಾರಿ ಉಮ್ಮರ್ ಫಾರೂಕ್, ಸದಸ್ಯರಾದ ಯಾಹ್ಯಾ, ಶರೀಫ್ ಚೈಯ್ಯ, ರಫೀಕ್ ಮೊನಾಕ, ಇಲಿಯಾಸ್, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Kshetra Samachara

Kshetra Samachara

10 days ago

Cinque Terre

5.28 K

Cinque Terre

0