ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: "ಬಡವರನ್ನು ಗುರುತಿಸಿ, ಮೂಲ ಸೌಲಭ್ಯ ಒದಗಿಸಲು ಸರಕಾರ ಬದ್ಧ "

ಮುಲ್ಕಿ: ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಿ, ಫಲಾನುಭವಿಗಳಿಗೆ ಸೂಕ್ತ ಸವಲತ್ತು ಒದಗಿಸಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಅವರು ಮುಲ್ಕಿ ನ.ಪಂ.ನಲ್ಲಿ 2020- 21ನೇ ಸಾಲಿನ ಶೇ. 24.10ರ ನಿಧಿಯಡಿ ಮನೆ ರಿಪೇರಿ ಫಲಾನುಭವಿಗಳಿಗೆ, ಶೌಚಾಲಯ ಫಲಾನುಭವಿಗಳಿಗೆ ಹಾಗೂ ಶೇ.7.25ರ ನಿಧಿಯಡಿ ಮನೆ ರಿಪೇರಿ ಫಲಾನುಭವಿಗಳಿಗೆ ಹಾಗೂ 2020- 21ರಲ್ಲಿ ರಾಜ್ಯದಲ್ಲಿ ಉಂಟಾದ ನೆರೆ ಹಾವಳಿಯಿಂದ ಹಾನಿಗೀಡಾಗಿರುವ ಮನೆಗಳ ಪುನರ್ ನಿರ್ಮಾಣ ಮತ್ತು ದುರಸ್ತಿ ಕಾಮಗಾರಿ ಆದೇಶ ಪತ್ರ ವಿತರಿಸಿ ಮಾತನಾಡಿದರು.

ಅಧ್ಯಕ್ಷತೆಯನ್ನು ಮುಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ ವಹಿಸಿದ್ದರು. ನ.ಪಂ. ಉಪಾಧ್ಯಕ್ಷ ಸತೀಶ್, ಮುಖ್ಯಾಧಿಕಾರಿ ಚಂದ್ರ ಪೂಜಾರಿ, ಸದಸ್ಯರಾದ ಹರ್ಷರಾಜ ಶೆಟ್ಟಿ, ರಾಧಿಕಾ ಕೋಟ್ಯಾನ್, ದಯಾವತಿ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

01/03/2021 07:22 pm

Cinque Terre

19.65 K

Cinque Terre

0

ಸಂಬಂಧಿತ ಸುದ್ದಿ