ಉಡುಪಿ: ಇಂದು ಉಡುಪಿ ಜಿಲ್ಲೆಯ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ಬಿ.ಆರ್.ಶೆಟ್ಟಿ ಪತ್ರಿಕಾಗೋಷ್ಠಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಿ ಆರ್ ಶೆಟ್ಟಿ ಕಮ್ ಬ್ಯಾಕ್ ಎಂದು ಸದ್ದು ಮಾಡಿದ್ದಾರೆ. ಶೆಟ್ಟಿ ಸಾಮ್ರಾಜ್ಯ ಮುಳುಗಿಲ್ಲ ನಾನು ಉಡುಪಿಯ ಮಗ , ಜೀವನದಲ್ಲಿ ಎಲ್ಲವನ್ನು ಸಮಾನವಾಗಿ ತೆಗೆದುಕೊಂಡುಹೋಗುವ ಮನೋಭಾವವುಳ್ಳ ವ್ಯಕ್ತಿ ನಾನಾಗಿದ್ದೇನೆ ಹಾಗೂನಾನು ಕೆಲವು ಜನರನ್ನು ನಂಬಿ ಮೋಸ ಹೋದೆ ಇದು ನನ್ನ ದೌರ್ಭಾಗ್ಯ ನನ್ನ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಸೇರಿದ ಒಬ್ಬನನ್ನು ಸಿ ಎಫ್ ಓ ಮಾಡಿದೆ, ಅವನೇ ನನ್ನ ಬೆನ್ನಿಗೆ ಚೂರಿ ಹಾಕಿದ ಮತ್ತು ನನಗೇ ತಿಳಿಯದ ಹಾಗೆ ಬೆನ್ನ ಹಿಂದೆ ಆರ್ಥಿಕ ವಂಚನೆ ಮಾಡಿದ್ದಾರೆ.
ಇಂತಹ ವ್ಯಕ್ತಿಗಳೇ ಆರೋಪಿ ಎಂದು ನಾನು ಹೇಳಲಾರೆ ಏಕೆಂದರೆ ಆರೋಪ ಇನ್ನೂ ಸಾಬೀತಾಗಿಲ್ಲ ಪ್ರಕರಣ ನ್ಯಾಯಾಲಯದಲ್ಲಿದ್ದ ಕಾರಣ ಹೆಚ್ಚೇನು ಹೇಳಲಾರೆ ಆದರೆ ಒಂದು ಮಾತ್ರ ಸತ್ಯ ಪಟ್ಟಭದ್ರ ಹಿತಾಸಕ್ತಿಗಳು ಸೇರಿ ನನಗೆ ವಂಚನೆ ಮಾಡಿದ್ದಾರೆ, ಜನರ ಆಶಿರ್ವಾದದಿಂದ ಈ ಎಲ್ಲಾ ಸಮಸ್ಯೆಗಳಿಂದ ನಾನು ಹೊರ ಬರುತ್ತೇನೆ,ಜನಸೇವೆಯೇ ಜನಾರ್ದನ ಸೇವೆ ಎಂದು ನಂಬಿದವನು ನಾನು ಎಂದರು.
ಎಲ್ಲಾರು ಒಂದು ವಿಚಾರ ತಿಳಿದುಕೋಳ್ಳಬೇಕು ಟ್ರಂಪ್ ಗೆ ಒಂದು ಕ್ರೆಡಿಟ್ ಕಾರ್ಡ್ ಕೂಡ ಕೊಡಲು ಅಮೆರಿಕದ ಬ್ಯಾಂಕುಗಳು ಹಿಂದೆ ಮುಂದೆ ನೋಡುತ್ತಿದ್ದವು, ಅಂತಹ ದಿವಾಳಿ ಆಗಿದ್ದ ಮನುಷ್ಯ ಬಳಿಕ ಅಮೆರಿಕದ ಅಧ್ಯಕ್ಷ ಆಗಲಿಲ್ಲವೇ? ಯಾರಿಗೂ ನಾನು ವಂಚನೆ ಮಾಡಿಲ್ಲ ಎಂಬ ಆತ್ಮವಿಶ್ವಾಸವಿದೆ,ನಾನು ಉಡುಪಿಯಲ್ಲಿದ್ದಾಗ ನನ್ನ ಕಿಸೆಯಲ್ಲಿ ಒಂದು ರೂಪಾಯಿ ದುಡ್ಡು ಇರುತ್ತಿರಲಿಲ್ಲ ಮತ್ತು ಸಾಲಮಾಡಿ ಬೈಕಿಗೆ ಪೆಟ್ರೋಲ್ ಹಾಕಿ ಓಡಾಡುತ್ತಿದ್ದೆ,ಯಾರಿಂದ ಸಾಲ ಪಡೆದಿದ್ದೇನೆ ,ಎಲ್ಲವನ್ನೂ ವಾಪಾಸು ಮಾಡಿದ್ದೇನೆ. ಐ ವಿಲ್ ಕಮ್ ಬ್ಯಾಕ್ ಅಗೈನ ನಾನು ಕಷ್ಟಪಟ್ಟು ದುಡಿದ ಹಣವನ್ನು ಮರು ಗಳಿಸುತ್ತೇನೆ ಮತ್ತು ನನ್ನ ಟ್ರಸ್ಟ್ ಮೂಲಕ ನಡೆಯುತ್ತಿರುವ ಎಲ್ಲಾ ಉಚಿತ ಸಮಾಜ ಸೇವೆಗಳನ್ನು ಮುಂದುವರಿಸುತ್ತೇನೆ ಎಂದು ಉಡುಪಿಯಲ್ಲಿ ಬಿಆರ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.
ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ
Kshetra Samachara
01/03/2021 04:18 pm