ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಶೈವ ಮತ್ತು ವೈಷ್ಣವ ಸಂಪ್ರದಾಯದ ನಡುವಿನ ತಿಕ್ಕಾಟಕ್ಕೆ ಉಡುಪಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ

ಉಡುಪಿ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಶಿವರಾತ್ರಿ ಪೂಜೆ ಬಗ್ಗೆ ರಾಜ್ಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.ಸದ್ಯ ವಿವಾದ ಚೆಂಡು ಮುಜರಾಯಿ ಇಲಾಖೆಯ ಅಂಗಳಕ್ಕೆ ಬಿದ್ದಿದೆ. ಪೂಜಾಪದ್ಧತಿಯ ಬಗ್ಗೆ ಮಾಧ್ವ, ಶೈವ ಗುಂಪುಗಳ ನಡುವೆ ಜಿಜ್ಞಾಸೆ ಮೂಡಿದ್ದು, ಎರಡೂ ಗುಂಪಿನರನ್ನು ಕರೆದು ಮಾತನಾಡುವ ಬಗ್ಗೆ ಮುಜರಾಯಿ ಸಚಿವರು ಚಿಂತನೆ ನಡೆಸಿದ್ದಾರೆ.

ಶಿವನ ಅಂಶ ಇರುವ ದೇವಾಲಯಗಳಲ್ಲಿ ಶಿವರಾತ್ರಿ ಆಚರಣೆ ಮಾಡಲು ಇಲಾಖೆ ಸೂಚಿಸುತ್ತದೆ. ಕುಕ್ಕೆಯಲ್ಲಿ ಈ ಬಗ್ಗೆ ಚರ್ಚೆ ಇದ್ದರೆ ಆಗಮ ಪಂಡಿತರು ತೀರ್ಮಾನ ಕೈಗೊಳ್ಳುತ್ತಾರೆ. ದೇವಸ್ಥಾನ, ಮುಜರಾಯಿ ಇಲಾಖೆಯ ಆಗಮ ಪಂಡಿತರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು. ಅಷ್ಟಮಂಗಲದ ವಿಚಾರಗಳನ್ನು ದೇವಸ್ಥಾನದ ಆಡಳಿತ ಮಂಡಳಿ ಗಮನಿಸುತ್ತದೆ.

ಅದ್ರೆ ಶಿವನ ಅಂಶ ಇರುವ ಕಡೆ ಶಿವನ ಆರಾಧನೆ ಸರ್ಕಾರ ಅವಕಾಶ ನೀಡುತ್ತದೆ ಎನ್ನುವ ಮೂಲಕ ಶೈವ ಸಂಪ್ರದಾಯದ ಪರ ನಿಂತವರಿಗೆ ಸಚಿವರು ಪರೋಕ್ಷವಾಗಿ ಬೆಂಬಲ ವ್ಯಕ್ತ ಪಡಿಸಿದಂತೆ ಕಾಣುತ್ತೆ.

ಒಟ್ಟಿನಲ್ಲಿ ಕುಕ್ಕೆ ವಿವಾದ ಪರಿಹಾರ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ.ಮುಜರಾಯಿ ಇಲಾಖೆ ಯ ಮಧ್ಯಸ್ಥಿಕೆಯ ಲ್ಲಿ ಸೋಮವಾರ ಶೈವ ಹಾಗೂ ಮಧ್ವ ಸಂಪ್ರದಾಯದ ಪರ ನಿಂತವರ ಜೊತೆಗೆ ಮಾತುಕತೆ ನಡೆಸಗುತ್ತೆ. ಆಗಮ ಪಂಡಿತರ ನೇತೃತ್ವದಲ್ಲಿ ಸಭೆ ನಡೆಯಲಿದೆ. ನಂತರ ವಾದ್ರೂ ಕಗ್ಗಂಟಾದ ಈ ವಿವಾದಕ್ಕೆ ತಾರ್ಕಿಕ ಅಂತ್ಯ ಸಿಗುತ್ತಾ ಕಾದು ನೋಡಬೇಕು.

Edited By : Manjunath H D
Kshetra Samachara

Kshetra Samachara

28/02/2021 10:41 pm

Cinque Terre

12.67 K

Cinque Terre

3

ಸಂಬಂಧಿತ ಸುದ್ದಿ