ಉಡುಪಿ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಬೇಕಾದ ಶಿವರಾತ್ರಿ ಮಹೋತ್ಸವ ಕ್ಷಣದಿಂದ ಕ್ಷಣಕ್ಕೆ ಗೊಂದಲದ ಗೂಡಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ದಲ್ಲಿ ನಡೆಯಬೇಕಾಗಿವ ಶಿವರಾತ್ರಿ ಮಹೋತ್ಸಕ್ಕೆ ಶೈವ ಮತ್ತು ವೈಷ್ಣವ ಸಂಪ್ರದಾಯದ ನಡುವಿನ ತಿಕ್ಕಾಟ ತಣ್ಣಗಾಗುವಂತೆ ಕಾಣುತ್ತಿಲ್ಲ. ಸುಬ್ರಹ್ಮಣ್ಯ ಹಿತ ರಕ್ಷಣಾ ಸಮಿತಿ ಶೈವ ಪೂಜ ಪದ್ದತಿಯನ್ನು ಅನುಸರಿಸುವಂತೆ ಆಗ್ರಹಿಸುತ್ತಿರುವ ಬೆನ್ನಲ್ಲೇ ಉಡುಪಿಯ ಮಧ್ವ ಪರಂಪರೆಯ ಗಳಲ್ಲಿ ಒಬ್ಬರಾದ ಪಲಿಮಾರು ಶ್ರೀಗಳು ಮಾದ್ವ ಸಂಪ್ರದಾಯ ಉಳಿಸಬೇಕು ಎಂದು ಬ್ಯಾಟಿಂಗ್ ಆರಂಭಿಸಿದ್ದಾರೆ. ಈ ನಡುವೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಡ್ಡಗೋಡೆ ಮೇಲೆ ದೀಪವಿಟ್ಟು ನುಣುಚಿಕೊಂಡಿದ್ದಾರೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದೇಶದ ಹಲವು ರಾಜ್ಯದ ಭಾಗಗಳಿಂದ ಭಕ್ತಸಾಗರವೇ ಹರಿದುಬರುತ್ತದೆ, ಈ ದೇವಸ್ಥಾನ ಸರ್ಕಾರ ಬೊಕ್ಕಸಕ್ಕೆ ಕೋಟಿ ಆದಾಯ ಮೂಲ ಕೂಡ ಹೌದು. ಅದ್ರೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸದಾ ಒಂದಲ್ಲ ಒಂದು ವಿವಾದಗಳ ಜೊತೆಗೆ ಸುದ್ದಿಯಲ್ಲಿ ಇರುತ್ತೆ ಅನ್ನೊದು ಅಷ್ಟೇ ಸತ್ಯ.
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶೈವ ಮತ್ತು ಮಾಧ್ವರ ನಡುವಿನ ಕಚ್ಚಾಟಕ್ಕೆ ಹೊಸ ವೇದಿಕೆ ಸಿದ್ಧವಾಗಿದೆ ಶತಮಾನಗಳ ಹಿಂದೆ ಈ ಕ್ಷೇತ್ರದಲ್ಲಿ ಶೈವಾಗಮದ ಪ್ರಕಾರವೇ ಪೂಜೆ ನಡೆಯುತ್ತಿತ್ತು. ಶೈವ ಪದ್ಧತಿಯನ್ನು ಅನುಸರಿಸುವ ಶೃಂಗೇರಿ ಮಠದ ವ್ಯಾಪ್ತಿಗೆ ಈ ಕ್ಷೇತ್ರ ಒಳಪಟ್ಟಿತ್ತು. ಮಾಧ್ವರ ಪ್ರಭಾವ ಹೆಚ್ಚಾದ ನಂತರ, ಹಳೆಯ ಸಂಪ್ರದಾಯಕ್ಕೆ ತಿಲಾಂಜಲಿ ನೀಡಿ ತಂತ್ರಸಾರ ಆಗಮದ ಪ್ರಕಾರ, ವೈಷ್ಣವ ಪದ್ದತಿಯಂತೆ ಪೂಜಾವಿಧಾನ ಆರಂಭವಾಯ್ತು.
ಆದರೆ ಮೂಲ ಪದ್ದತಿಯಲ್ಲೇ ಆರಾಧನೆ ನಡೆಯಬೇಕು ಎಂದು ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ದೇವಸ್ಥಾನ ಹಿತರಕ್ಷಣಾ ಸಮಿತಿ ಆಗ್ರಹಿಸಲಾರಂಭಿಸಿದೆ. ಈ ಬಾರಿ ಶಿವರಾತ್ರಿಯ ದಿನ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಶೈವಾಗಮ ಪ್ರಕಾರ ರುದ್ರ ಪಾರಾಯಣ, ಭಸ್ಮಾರ್ಚನೆ, ಜಾಗರಣೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಹಿತರಕ್ಷಣಾ ಸಮಿತಿ ಮುಜರಾಯಿ ಇಲಾಖೆಗೆ ಮನವಿ ಸಲ್ಲಿಸಿದೆ. ಇದು ಮಾಧ್ವರ ನ್ನು ಕೆರಳಿಸಿದೆ, ಮಾಧ್ವಸಂಪ್ರದಾಯದ ಮೂಲ ಕೇಂದ್ರವಾದ ಉಡುಪಿಯಲ್ಲಿ ಸೇರಿದ ಮಾಧ್ವ ಪಂಡಿತರು,‘ ಸಂಪ್ರದಾಯ ಬದಲಿಸಬೇಡಿ’ ಎಂದು ಆಗ್ರಹಿಸಿದ್ದಾರೆ. ಮಧ್ವ ಪಂಡಿತ ಅಗ್ರಹದ ಬೆನ್ನಲ್ಲೇ ಪಲಿಮಾರು ಮಠದ ಶ್ರೀಗಳು ಕೂಡ ಇದೇ ವಿಚಾರವನ್ನು ಪುನರುಚ್ಚರಿಸಿದ್ದಾರೆ.
ಮಧ್ವಾಚಾರ್ಯರ ಕಾಲದಿಂದ ಕುಕ್ಕೆಯಲ್ಲಿ ಮಾಧ್ವ ಮಠದವರೇ ಪೂಜೆ ಮಾಡುತ್ತಾ ಬಂದಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ದೇವಾಲಯದ ಹಾಗೆ ಅಲ್ಲ. ಕುಕ್ಕೆಯ ಆಚರಣೆ ಸಂಪ್ರದಾಯಗಳು ಮಠದಂತೆ ಇದೆ. ಕುಕ್ಕೆಯಲ್ಲಿ ದೇವರ ಉತ್ಸವ ಮೂರ್ತಿಯನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗುವ ಉತ್ಸವ ನಡೆಯುವುದಿಲ್ಲ. ಆಚಾರ್ಯ ಮಧ್ವರ ಕಾಲದಿಂದ ಮಾಧ್ವರಿಂದ ಪೂಜೆ ನಡೆಯುತ್ತಿದೆ .
ಕುಕ್ಕೆಯಲ್ಲಿ ಈ ಹಿಂದಿನಿಂದಲೂ ನಡೆದುಕೊಂಡು ಪೂಜಾ ಪದ್ಧತಿ ಯನ್ನು ಮುಂದುವರಿಸಬೇಕು. ಆಚರಣೆಯಲ್ಲಿ ಭಿನ್ನವಾದರೆ ದೇವಸ್ಥಾನ ಅದನ್ನು ಒಪ್ಪಿಕೊಳ್ಳುವುದಿಲ್ಲ. ಪ್ರತಿಷ್ಠಾ ಕಾಲದಲ್ಲಿ ಪೂಜೆ ಯಾವ ರೀತಿ ಆರಂಭವಾಗಿದೆ ಅದು ಹಾಗೆಯೇ ಮುಂದುವರೆಯಬೇಕು. ಯಾವುದೇ ವ್ಯತ್ಯಾಸಗಳು ಆದರೆ ದೋಷ ಬರುತ್ತದೆ.
ನನಗೆ ರುದ್ರನ ಮೇಲೆ ದ್ವೇಷ ಇಲ್ಲ. ನಾನು ರುದ್ರ ಪಾರಾಯಣ ಮಾಡುತ್ತೇನೆ. ಯಾವುದೇ ದೇವಸ್ಥಾನದಲ್ಲಿ ಆಗಲಿ ಅನೂಚಾನವಾಗಿ ಬಂದ ಆಚರಣೆ ಅದು ಹಾಗೆಯೇ ಮುಂದುವರೆಯಬೇಕು. ಮಂತ್ರ ಕ್ರಮ ಎಲ್ಲವೂ ತಂತ್ರದ ರೀತಿಯಲ್ಲಿ ಬಂದರೆ ಚಂದ. ಕುಕ್ಕೆಯಲ್ಲಿ ಸ್ಕಂದನ ದೇವಸ್ಥಾನ ಇರುವುದು. ಸ್ಕಂದನ ಪೂಜೆ ಹೇಗೆ ಆಗಬೇಕೋ ಅದು ಹಾಗೆ ನಡೆದುಕೊಂಡು ಬರುತ್ತಿದೆ. ಸುಬ್ರಮಣ್ಯ ಸ್ಕಂದ ಕೇಂದ್ರಿತ ವಾದಂತಹ ಕ್ಷೇತ್ರ. ಬದಲಾವಣೆಗಳು ಆಗಬೇಕಾದರೆ ವಿಮರ್ಶೆ ಮಾಡಬೇಕು. ನನ್ನ ಅಭಿಪ್ರಾಯ ಕೇಳಿದರೆ ಯಾವುದೇ ಪೂಜಾ ಬದಲಾವಣೆಗಳು ಬೇಡ ಎಂದಿದ್ದಾರೆ.
Kshetra Samachara
28/02/2021 10:32 pm