ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರನ್ನು ಸರಕಾರವೇ ಬ್ರ್ಯಾಂಡ್ ಮಾಡಬೇಕು: ಸಚಿವ ಸಿ.ಪಿ.ಯೋಗೀಶ್ವರ್

ಮಂಗಳೂರು: ನಗರದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದರೂ ನಿರೀಕ್ಷಿತ ಮಟ್ಟದ ಬೆಳವಣಿಗೆ ಆಗಿಲ್ಲ. ಪ್ರಸ್ತುತ ಸರಕಾರ ಮಂಗಳೂರಿನಲ್ಲಿ ಪ್ರವಾಸೋದ್ಯಮವನ್ನು ಉದ್ಯಮವಾಗಿ, ವೃತ್ತಿಯಾಗಿ ಪರಿವರ್ತಿಸುವಲ್ಲಿ ಸೋತಿದೆ. ಆದ್ದರಿಂದ ಸರಕಾರವೇ ಮಂಗಳೂರನ್ನು ಬ್ರ್ಯಾಂಡ್ ಮಾಡಬೇಕಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ್ ಹೇಳಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ‌ ಮಾತನಾಡಿದ ಅವರು, ಮೊಟ್ಟ ಮೊದಲನೆಯದಾಗಿ ಸರಕಾರ ಮಂಗಳೂರನ್ನು ಹೆಲ್ತ್ ಸಿಟಿಯಾಗಿ ಉತ್ತೇಜನ ನೀಡಿ ವಿಶೇಷವಾದ ಸ್ಥಾನಮಾನಗಳನ್ನು, ಅನುಕೂಲಗಳನ್ನು ಮಂಗಳೂರಿಗೆ ನೀಡಿದ್ದಲ್ಲಿ ಹೆಲ್ತ್ ಟೂರಿಸಂ ಖಂಡಿತಾ ಅಭಿವೃದ್ಧಿ ಆಗಲಿದೆ. ಈ ಮೂಲಕ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಿಸಲು ಸಾಧ್ಯ ಎಂದು ಹೇಳಿದರು.

ಜೊತೆಗೆ ಮುಂದಿನ ದಿನಗಳಲ್ಲಿ ಟೆಂಪಲ್ ಟೂರಿಸಂ, ಹೆಲಿ ಟೂರಿಸಂ ಅಭಿವೃದ್ಧಿಗೂ ಯೋಜನೆ ಹಾಕಿಕೊಳ್ಳಲಾಗುತ್ತಿದೆ. ಕ್ರೂಸ್ ಮುಖಾಂತರ ಬರುವ ವಿದೇಶಿ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಆಗುತ್ತಿಲ್ಲ. ಅಲ್ಲದೆ ಪಿಲಿಕುಳ ನಿಸರ್ಗಧಾಮದಂತಹ ಪ್ರವಾಸಿತಾಣಗಳು ಇದ್ದರೂ, ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಂಪರ್ಕ ವ್ಯವಸ್ಥೆಯ ಕೊರತೆಯಿದೆ. ಈ ಬಗ್ಗೆಯೂ ಚಿಂತನೆ ನಡೆಸಿ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ಕೈಗೊಳ್ಳಲಾಗುತ್ತದೆ. ಕೇಂದ್ರದ ಸಾಗರಮಾಲಾ ಯೋಜನೆಗೆ ಸೀಪ್ಲೇಯರ್ ಅನ್ನು ಜೋಡಣೆ ಮಾಡುವ ಮೂಲಕ ಎಲ್ಲಾ ನದಿಗಳ ಹಿನ್ನೀರು ಪ್ರದೇಶಗಳನ್ನು ಬಳಸಿ ಪ್ರವಾಸೋದ್ಯಮ ವಿಸ್ತರಿಸಲು ಸಾಧ್ಯ. ಈ ಮೂಲಕ 320 ಕಿ.ಮೀ. ಉದ್ದದ ಕೋಸ್ಟಲ್ ಬೆಲ್ಟ್ ದೊಡ್ಡ ಹಬ್ ಆಗಿ ಪರಿವರ್ತನೆ ಗೊಳ್ಳಲಿದೆ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಸರಕಾರದ ಮುಂದೆ ಪ್ರಸ್ತಾವ ಸಲ್ಲಿಸಲಾಗುತ್ತದೆ ಎಂದು ಸಚಿವ ಸಿ.ಪಿ.ಯೋಗೀಶ್ವರ್ ಹೇಳಿದರು.

Edited By : Nagesh Gaonkar
Kshetra Samachara

Kshetra Samachara

27/02/2021 06:32 pm

Cinque Terre

17.91 K

Cinque Terre

1

ಸಂಬಂಧಿತ ಸುದ್ದಿ