ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಕಾಂಗ್ರೆಸ್ ಜನಧ್ವನಿ ಪಾದಯಾತ್ರೆ ಸಮಾರೋಪ; ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಭಾಗಿ

ಬೈಂದೂರು: ಕೇಂದ್ರ ಮತ್ತು ರಾಜ್ಯ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಕಾಂಗ್ರೆಸ್ ಜಿಲ್ಲೆಯಲ್ಲಿ ನಿರಂತರ ಆರು ದಿನ‌ಗಳ ವರೆಗೆ ಪಾದಯಾತ್ರೆ ಮೂಲಕ ಜನರ ಗಮನ ಸೆಳೆಯಲು ಹೋರಾಟ ನಡೆಸಿದ್ದು, ಇಂದು ಬೈಂದೂರಿನಲ್ಲಿ ಸಮಾರೋಪ ಜರುಗಿತು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರು, ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಭಾಗಿಯಾದರು. ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ ನೇತೃತ್ವದಲ್ಲಿ ಪಾದಯಾತ್ರೆ ಸಮಾಪನಗೊಳಿಸಲಾಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾಗವಹಿಸಿ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿದರು.

ಫೆಬ್ರವರಿ 22ರಿಂದ ಹೆಜಮಾಡಿಯಿಂದ ಈ ಜನಧ್ವನಿ ಪಾದಯಾತ್ರೆ ಪ್ರಾರಂಭವಾಗಿ ಆರು ದಿನಗಳ ವರೆಗೆ ನಡೆಯಿತು. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪಾದಯಾತ್ರೆ ಉದ್ಘಾಟಿಸಿದ್ದರು.

ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಬಂದಿದ್ದ ಪಾದಯಾತ್ರೆಯನ್ನು ಬೈಂದೂರಿನಲ್ಲಿ ಇಂದು ಅಂತಿಮಗೊಳಿಸಲಾಯಿತು.

Edited By : Nagesh Gaonkar
Kshetra Samachara

Kshetra Samachara

27/02/2021 04:17 pm

Cinque Terre

19.49 K

Cinque Terre

2