ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಚಿಣ್ಣರ ಲೋಕ ಮೊಕೇದಾ ಕಲಾವಿದೆರ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ನಡೆದ 15 ದಿನಗಳ ಕೃಷಿ ಉತ್ಸವ & ಕರಾವಳಿ ಕಲೋತ್ಸವದ ಸಮಾರೋಪ ಸಮಾರಂಭ ನಡೆಯಿತು.
ಮುಖ್ಯ ಅತಿಥಿಯಾಗಿ ಮುಂಬೈ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸಿದ್ದರು. ಫೆ.16ರಿಂದ 20ರ ತನಕ ನಾಟಕ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಬಂಟ್ವಾಳ ತಾಲೂಕಿನ ಹಲವು ನಾಟಕ ತಂಡಗಳು ಭಾಗವಹಿಸಿತ್ತು.
ತೆಲಿಕೆದ ಕಲಾವಿದೆರ್ ಕೊಯಿಲ ತಂಡ 'ಇನಿಮುಟ್ಟ ಇಂಚಾತಿಜಿ' ನಾಟಕ ಪ್ರದರ್ಶಿಸುವ ಮೂಲಕ ಪ್ರಥಮ ಪ್ರಶಸ್ತಿ ಪಡೆದುಕೊಂಡಿತು.
ಪುಂಜಾಲಕಟ್ಟೆಯ ತಾಂಬೂಲ ಕಲಾವಿದೆರ್ ತಂಡ ಎರಡನೇ ಸ್ಥಾನ ಪಡೆದರೆ ರಂಗ ಕಲಾವಿದೆರ್ ತಂಡ ಕಡೆಗೋಳಿ ತೃತೀಯ ಸ್ಥಾನ ಪಡೆಯಿತು.
ಪ್ರತಿಯೊಂದು ವಿಭಾಗದಲ್ಲಿ ಉತ್ತಮ ಅಭಿನಯಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರೋಪದಲ್ಲಿ ಕಲೋತ್ಸವ ಅಧ್ಯಕ್ಷ ಸುದರ್ಶನ್ ಜೈನ್, ಜಿಪಂ ಸದಸ್ಯ ಚಂದ್ರಪ್ರಕಾಶ್ ತುಂಬೆ, ಭಾಸ್ಕರ್ ರೈ ಕುಕ್ಕುವಳ್ಳಿ, ರಂಗಭೂಮಿ ಕಲಾವಿದರಾದ ರಮೇಶ್ ರೈ ಕುಕ್ಕುವಳ್ಳಿ, ಸುಧೀರ್ ರಾಜ್ ಉರ್ವ, ಬಂಟ್ವಾಳ ನಗರ ಠಾಣೆ ಉಪ ನಿರೀಕ್ಷಕ ಅವಿನಾಶ್, ಚಿಣ್ಣರಲೋಕ ಸ್ಥಾಪಕ ಸಂಚಾಲಕರಾದ ಮೋಹನ್ ದಾಸ ಕೊಟ್ಟಾರಿ ಮುನ್ನೂರು, ಅರುಣ್ ಶೆಟ್ಟಿ ಪೇಜಾವರ, ವಕೀಲ ಜಯರಾಮ್ ರೈ ಸೇರಿದಂತೆ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು.
Kshetra Samachara
26/02/2021 05:48 pm