ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲ್ಯಾಡಿ: ಪಿಎಫ್ಐ ನಾಯಕರು, ಕಾರ್ಯಕರ್ತರ ಮೇಲೆ ಯೋಗಿ ಸರಕಾರದಿಂದ ದೌರ್ಜನ್ಯ; ಆಕ್ರೋಶ

ನೆಲ್ಯಾಡಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ( ಪಿಎಫ್ಐ) ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿದ್ದು, ನೆಲ್ಯಾಡಿ ಡಿವಿಜನ್ ವತಿಯಿಂದ ದ.ಕ. ಜಿಲ್ಲೆಯ ನೆಲ್ಯಾಡಿ ಪೇಟೆಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ‌ ಸಂದರ್ಭ ಸಾದಿಕ್ ಅತ್ತಾಜೆ ಮಾತನಾಡಿ, ಉತ್ತರ ಪ್ರದೇಶ ಯೋಗಿ ಸರಕಾರದ ವಿರುದ್ಧ ಪ್ರತಿಭಟಿಸುವವರನ್ನು ಅಲ್ಲಿನ ಪೊಲೀಸರು ದಮನಿಸುವ ಕಾರ್ಯವನ್ನು ನಿರಂತರ ಮಾಡಿಕೊಂಡು ಬರುತ್ತಿದ್ದು, ಇದೀಗ ಪಾಪ್ಯುಲರ್ ಫ್ರಂಟ್ ನ ನಾಯಕರು, ಮುಖಂಡರು ಮತ್ತು ಕಾರ್ಯಕರ್ತರನ್ನು ಅನ್ಯಾಯವಾಗಿ ಅಪಹರಿಸಿ ಹಿಂಸೆ ನೀಡಿ, ನಂತರ ಸುಳ್ಳಾರೋಪ ಹೊರಿಸಿ ಕೇಸು ಹಾಕಿದ್ದು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಪಾಪ್ಯುಲರ್ ಫ್ರಂಟ್ ನೆಲ್ಯಾಡಿ ಅಧ್ಯಕ್ಷ ಸಿದ್ದೀಕ್ ನೆಲ್ಯಾಡಿ ಉಪಸ್ಥಿತರಿದ್ದರು. ಝುಬೈರ್ ಕೊಕ್ಕಡ ನಿರೂಪಿಸಿದರು.

ಸಭೆಯಲ್ಲಿ ಉತ್ತರ ಪ್ರದೇಶ ಸರಕಾರ ಮತ್ತು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.

Edited By : Manjunath H D
Kshetra Samachara

Kshetra Samachara

25/02/2021 11:57 am

Cinque Terre

17.86 K

Cinque Terre

5

ಸಂಬಂಧಿತ ಸುದ್ದಿ