ಮಂಗಳೂರು: ಮಂಗಳೂರು ನಗರವು ಉದ್ಯಮದ ಆಧಾರದಲ್ಲಿ ಬೆಳೆದು ಅಭಿವೃದ್ಧಿಯ ಪಥದಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಆರ್ಥಿಕ ಚಲನವಲನಗಳು ಹೆಚ್ಚಬೇಕು. ಆದರೆ ಇಲ್ಲಿನ ಸಂಸ್ಕೃತಿ ಹಾಗೂ ಪರಂಪರೆಗೆ ಧಕ್ಕೆಯಾಗದ ರೀತಿಯಲ್ಲಿ ಮಂಗಳೂರು ಬೆಳೆಯಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ನಗರದ ಓಶಿಯನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ನಡೆದ ಮಂಗಳೂರು ಇನ್ನೋವೇಷನ್ ಕಾನ್ಕ್ಲೇವ್ ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಮೂಲ ನಿವಾಸಿಗಳೇ ಕಣ್ಮರೆಯಾಗುಷ್ಟು ಮಟ್ಟಿಗೆ ಬೆಂಗಳೂರು ಬದಲಾಗಿದೆ. ಆದರೆ ಸಂಸ್ಕೃತಿ, ಸಂಪ್ರದಾಯ ಮರೆತು ಹೋಗುವಂತಹ ಅಭಿವೃದ್ಧಿ ಮಂಗಳೂರಿಗೆ ಅಗತ್ಯವಿಲ್ಲ. ಆದ್ದರಿಂದ ಮಂಗಳೂರಿಗರು ಇದ್ದೇ ಇಲ್ಲಿನ ಅಭಿವೃದ್ಧಿ ಆಗಬೇಕು ಎಂದು ಹೇಳಿದರು.
ಕೈಗಾರಿಕೋದ್ಯಮಿಗಳು, ಶಿಕ್ಷಣ ತಜ್ಞರನ್ನು ಸೇರಿಸಿ ಈ ಮಂಗಳೂರು ಇನ್ನೋವೇಷನ್ ಕಾನ್ ಕ್ಲೇವ್ ಸಭೆಯನ್ನು ಆಯೋಜಿಸಲಾಗಿದೆ. ಗುಜರಾತ್ ಮಾದರಿಯಲ್ಲಿ ಏಕಗವಾಕ್ಷಿ ಆಧಾರದಲ್ಲಿ ಎಲ್ಲ ಕೈಗಾರಿಕೋದ್ಯಮಿಗಳಿಗೆ ಒಂದೆರಡು ದಿನಗಳಲ್ಲೇ ನೇರವಾಗಿ ಉದ್ಯಮ ವಿಸ್ತಾರಕ್ಕೆ ಅವಕಾಶ ದೊರೆಯಬೇಕು. ಈ ಮೂಲಕ ಮಂಗಳೂರು ಜಗತ್ತಿಗೇ ಒಂದು ಹಬ್ ಆಗಿ ಬೆಳಕು ಚೆಲ್ಲಬೇಕು. ಇಂದು ನಡೆಯುವ ಸಂವಾದದ ಆಧಾರದಲ್ಲಿ, ವಿದೇಶ ಪ್ರವಾಸ ಮಾಡಿ, ಮಂಗಳೂರು ಮಾದರಿಯ ಕಲ್ಪನೆ ಇರುವ ದೇಶಗಳಿಗೆ ಭೇಟಿ ನೀಡಿ ಜೂನ್ ತಿಂಗಳಲ್ಲಿ ದೊಡ್ಡದಾದ ಉದ್ಯಮ ಮೇಳ ಆಯೋಜನೆ ಮಾಡಲಾಗುತ್ತದೆ ಎಂದು ನಳಿನ್ ಕುಮಾರ್ ಹೇಳಿದರು.
Kshetra Samachara
24/02/2021 06:07 pm