ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪಿಎಫ್ಐ, ಎಸ್ ಡಿಪಿಐ ಬೆಳವಣಿಗೆಗೆ ಮೂಲ ಕಾರಣ ಆಗಿರುವ ಕಾಂಗ್ರೆಸ್ ಅದರ ಬಿ ಟೀಂ; ಅಶ್ವತ್ಥ ನಾರಾಯಣ್

ಮಂಗಳೂರು: ಪಿಎಫ್ಐ ಹಾಗೂ ಎಸ್ ಡಿಪಿಐ ಸಂಘಟನೆಗಳ ಬೆಳವಣಿಗೆಗೆ ಮೂಲ ಕಾರಣವಾಗಿರು ವ ಕಾಂಗ್ರೆಸ್ ಪಕ್ಷವೇ ಅವುಗಳ ಬಿ ಟೀಂ‌. ಹಿಂದೆ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಪಿಎಫ್ಐ, ಎಸ್ ಡಿಪಿಐನ ಎಲ್ಲಾ ಪ್ರಕರಣಗಳನ್ನು ಕೈ ಬಿಟ್ಟು, ಅವರ ಬೆಳವಣಿಗೆಗೆ ಪೂರಕವಾಗಿ ಕಾಂಗ್ರೆಸ್ ಸಹಕಾರ ನೀಡಿತ್ತು ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಮಂಗಳೂರಿನಲ್ಲಿ ಹೇಳಿದರು.

ಕಾಂಗ್ರೆಸಿಗರು ಸುಳ್ಳು ಹೇಳುವುದರಲ್ಲಿ ನಿಪುಣರು. ಸಮಾಜದ ಬಗ್ಗೆ ಅವರಿಗೆ ಕಾಳಜಿ ಇಲ್ಲ. ಓಲೈಕೆಯ ರಾಜಕಾರಣದಲ್ಲಿ ತೊಡಗಿಸಿಕೊಂಡ ಅವರನ್ನು ಇದೀಗ ಇಡೀ ಸಮಾಜವೇ ತಿರಸ್ಕರಿಸಿದೆ. ಆದರೂ ಅವರು ಬುದ್ಧಿ ಕಲಿಯಲ್ಲ‌ ಎಂದು ಡಿಸಿಎಂ ಅಶ್ವತ್ಥ ನಾರಾಯಣ್ ಹೇಳಿದರು.

ಪಿಎಫ್ಐ, ಎಸ್ ಡಿಪಿಐ ಸಂಘಟನೆಗಳನ್ನು ನಿರ್ಬಂಧಿಸಲು ಬೇಕಾಗಿರುವ ದಾಖಲೆಗಳನ್ನು, ಮಾಹಿತಿಗಳನ್ನು ಇಲ್ಲದಂತೆ ಮಾಡಲಾಗಿದೆ. ಇದೀಗ ತನಿಖೆಯ ಮೂಲಕ ಸತ್ಯ ಬಯಲಾದಲ್ಲಿ ದಾಖಲೆಗಳ ಆಧಾರದ ಮೇಲೆ ಎರಡೂ ಸಂಘಟನೆಗಳನ್ನು ಬ್ಯಾನ್ ಮಾಡಲಾಗುತ್ತದೆ. ಅದಕ್ಕಾಗಿ ಆಧಾರಗಳನ್ನು ಕಲೆ ಹಾಕಿ, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಶ್ವತ್ಥ ನಾರಾಯಣ್ ಹೇಳಿದರು.

Edited By : Nagesh Gaonkar
Kshetra Samachara

Kshetra Samachara

24/02/2021 03:00 pm

Cinque Terre

13.3 K

Cinque Terre

0

ಸಂಬಂಧಿತ ಸುದ್ದಿ