ಉಡುಪಿ: ಕೇಂದ್ರ ಸರ್ಕಾರದ ಬೆಲೆಯೇರಿಕೆ ನೀತಿ ಮತ್ತು ಕೃಷಿ ಕಾಯಿದೆಗಳ ವಿರುದ್ಧ ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ನೇತೃತ್ವದ ಜನಧ್ವನಿ ಪಾದಯಾತ್ರೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಒಟ್ಟು 108 ಕಿಲೋಮೀಟರ್ ಗಳು ಕಾಲ್ನಡಿಗೆ ಜಾಥಾ ನಡೆಯಲಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಉದ್ಘಾಟನೆ ಮಾಡಿದ್ದರು. ಇಂದು ಪ್ರತಿಭಟನಾ ಮೆರವಣಿಗೆ ಉಡುಪಿ ವಿಧಾನಸಭಾ ಕ್ಷೇತ್ರವನ್ನು ಪ್ರವೇಶಿಸಿದೆ. ಉಡುಪಿ ವಿಧಾನಸಭಾ ಕ್ಷೇತ್ರದಿಂದ ಕುಂದಾಪುರ ವಿಧಾನಸಭಾ ಕ್ಷೇತ್ರ ದಾಟಿ ಬೈಂದೂರು ತಾಲೂಕು ಗಡಿಯಲ್ಲಿ ಫೆಬ್ರುವರಿ 27 ಜನಜಾಗೃತಿ ಪಾದಯಾತ್ರೆಯ ಸಮಾರೋಪ ನಡೆಯಲಿದೆ. ಶನಿವಾರ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಸಮಾರೋಪಕ್ಕೂ ಮುನ್ನ ಜಾಥಾದಲ್ಲಿ ಪ್ರತಿಭಟನೆಯ ಹೆಜ್ಜೆ ಹಾಕಲಿದ್ದಾರೆ.
Kshetra Samachara
24/02/2021 12:26 pm