ಉಡುಪಿ : ಕುಂದಾಪುರದ ಬಸ್ರೂರಿನಲ್ಲಿ ಆಯೋಜಿಸಲಾದ ಕನ್ನಡ ನಾಡಿನಲ್ಲಿ ಛತ್ರಪತಿ ಶಿವಾಜಿ ಕಾರ್ಯಕ್ರಮದ ಕುರಿತು ಎದ್ದ ಕೆಲವು ಅಪಸ್ವರಗಳಿಗೆ ಹಡಗಲ ಹಲ ಸ್ವಾಮೀಜಿ ಬಿಸಿ ಮುಟ್ಟಿಸಿದ್ದಾರೆ. ಅವರು ಮಾತನಾಡುತ್ತಾ, ಶಿವಾಜಿ ಕರ್ನಾಟಕದವರಲ್ಲ ಮಹಾರಾಷ್ಟ್ರದವರು ಎನ್ನುವ ಮಾತು ಕೇಳಿಬರುತ್ತದೆ. ಅತಿ ಬುದ್ಧಿವಂತರ, ದಿನವು ಪೆನ್ನು-ಪೇಪರ್ ಹಿಡಿಯುವ ಬುದ್ಧಿವಂತರ ಪ್ರಶ್ನೆ. ಇಡೀ ಹಿಂದೂ ಸಮಾಜವನ್ನು ಒಂದುಗೂಡಿಸಿದ ಶಿವಾಜಿ ಅವರನ್ನು ಮಹಾರಾಷ್ಟ್ರಕ್ಕೆ ಸೀಮಿತಗೊಳಿಸುವ ಜನ ನಮ್ಮಲ್ಲಿದ್ದಾರೆ. ಶಿವಾಜಿ ಮಹಾರಾಜರು ಮಹಾರಾಷ್ಟ್ರದವರು ಎನ್ನುವುದಾದರೆ ನನ್ನದೊಂದು ಪ್ರಶ್ನೆ ಇದೆ ಆದರೆ ಈ ದೇಶಕ್ಕೆ ಸಂವಿಧಾನ ಬರೆದಂತಹ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಕರ್ನಾಟಕದವರ ?.ಹಾಗಾದರೆ ಇಡೀ ಭಾರತ ಒಪ್ಪಿಕೊಂಡಿರುವ ಅಂತಹ ಮಹಾನ್ ನಾಯಕ ಅಂಬೇಡ್ಕರ್ ಅವರನ್ನು ನೀವು ಒಪ್ಪಿಲ್ಲ ಅಂದ ಹಾಗೆ ಆಗಿದೆ. ದೇಶ ಪ್ರಧಾನಿಗೆ ಮರ್ಯಾದೆ ನೀಡದೆ ಗುಜರಾತಿ ಎನ್ನುತ್ತಿರೀ, ಹಾಗಾದರೆ ದಿನವು ನೀವು ಭಜನೆ ಮಾಡುವ ಗಾಂಧಿ ಎಲ್ಲಿಯವರು. ಇಲ್ಲಿ ಶಿವಾಜಿ, ರಾಮ ಬಗ್ಗೆ ಮಾತನಾಡುತ್ತಾರೆ ಅದಕ್ಕೆ ಸೂಕ್ತ ಉತ್ತರ ದೊರಕಿದೆ ಎಂದರು.
Kshetra Samachara
23/02/2021 09:57 am