ವರದಿ: ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ
ಉಡುಪಿ: ಕನ್ನಡದ ನೆಲದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಕಾರ್ಯಕ್ರಮ ಬಸ್ರೂರು ಶಾರದಾ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶದ ಮೂಲಕ ಆರಂಭವಾಯಿತು.
ಈ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿದ ಸೂಲಿಬೆಲೆ, ''ಶಿವಾಜಿ ಮಹಾರಾಜರು ಕರ್ನಾಟಕದವರು ಅಲ್ಲವೇ ಅಲ್ಲ ಎಂದು ಕೆಲವು ಅಯೋಗ್ಯರು ಹೇಳುತ್ತಾರೆ. ಆದರೆ ರಾಮನು ಕನ್ನಡದವರಲ್ಲ ಕೃಷ್ಣನು ಕನ್ನಡದವರಲ್ಲ ನಿಮಗೆ ರಾಮ ಕೃಷ್ಣರನ್ನು ಕಂಡರೆ ಆಗುವುದಿಲ್ಲವೆಂದು ಒಪ್ಪುತ್ತೇನೆ. ಫಾರ್ಮರ್ ಪ್ರೊಟೆಸ್ಟ್ ಗೆ ಬೆಂಬಲ ನೀಡಿದ ಗ್ರೇಟಾ ಟೆನ್ ಬರ್ಗ್, ರೆಹಾನಾ ಬಸ್ರೂರಿನ ಪಕ್ಕದೂರಿನವಳೇ, ಮಂಗಳೂರಿನವಳೆ ಅಲ್ಲದೇ ಅವರ್ಯಾರು ಈ ದೇಶದವರಲ್ಲದಿದ್ದರೂ ಅವಳ ಟ್ವೀಟ್ ನಮೂದಿಸಿ ಸಂಭ್ರಮಿಸಿದ್ರಿ ಏಕೆ. ಅವರು ಮಾಡಿದ ಒಂದು ಟ್ವೀಟ್ ಎನ್ನುವುದಕ್ಕಾಗಿ ದೇಶಕ್ಕೆ ಬೆಂಕಿ ಹಚ್ಚಬಲ್ಲ ಎಂದು ಆಲೋಚನೆ ಮಾಡಿದರಲ್ಲ ನೀವು, ನಾವು ಶಿವಾಜಿ ಮಹಾರಾಜರಿಗೆ ಏಕೆ ಗೌರವ ಕೊಡುತ್ತೇವೆ ಎನ್ನುದನ್ನ ತಿಳಿದುಕೊಳ್ಳಿ ಎಂದು ಹೇಳಿದರು.
ಕೆಳದಿ ಅರಸರಿಗೆ ಪರಕೀಯರಿಂದ ಮುಕ್ತಿ ನೀಡಿ, ಬಸ್ರೂರನ್ನು ಬಂಧ ಮುಕ್ತಗೊಳಿಸಿದ್ದು ಶಿವಾಜಿ ಎಂದು ಹೇಳಲು ನಮಗೆ ಹೆಮ್ಮೆಯಾಗುತ್ತದೆ ಹಾಗೂ ಅದು ಹೇಗೆ ಆಲೋಚನೆ ಮಾಡಿ. ಶಿವಾಜಿ ಮಹಾರಾಜರು ಕನ್ನಡದವರಲ್ಲ ಅಂತೀರಿ ನೀವುಗಳು ನಿಮಗೆ ಇತಿಹಾಸದ ಅರಿವೇ ಇಲ್ಲ ಎಂದು ಕುಂದಾಪುರದ ಬಸ್ರೂರು ಕಾರ್ಯಕ್ರಮದಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದ್ದಾರೆ.
Kshetra Samachara
23/02/2021 09:35 am