ಉಡುಪಿ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಿಸಲು ನಮಗೆ ಪಿಎಫ್‌ಐ ಹಣದ ಅಗತ್ಯವಿಲ್ಲ ಎಂದಿರುವ ಸಂಸದೆ ಶೋಭಾ ಕರಂದ್ಲಾಜೆ, ಪಿಎಫ್ಐ ಕಾರ್ಯಕರ್ತರ ಬಳಿ ನಮ್ಮ ಕಾರ್ಯಕರ್ತರು ಹಣ ಕೇಳಲು ಹೋಗಿಲ್ಲ. ಪಿಎಫ್‌ಐ ರಾಷ್ಟ್ರ ವಿರೋಧಿ ಸಂಘಟನೆ ಎಂದರು.
ಉಡುಪಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಿಎಫ್‌ಐ ನಮ್ಮ ಆರ್‌ಎಸ್‌ಎಸ್ ಸ್ವಯಂಸೇವಕರನ್ನು ಕೊಲೆ ಮಾಡಿದೆ.
ಶ್ರೀ ರಾಮ ಮಂದಿರದ ಬಗ್ಗೆ ಪಿಎಫ್ ಐ ಗೆ ಮಾತನಾಡುವ ಹಕ್ಕಿಲ್ಲ. ಪಿಎಫ್‌ಐ ಅನ್ನು ನಿಷೇಧಿಸಲು ನಾನು ಕೇಂದ್ರ ಮತ್ತು ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದರು.
ಪಿಎಫ್‌ಐ ವಿರುದ್ಧದ ಎಲ್ಲ ಪ್ರಕರಣಗಳನ್ನು ಗೃಹ ಸಚಿವಾಲಯ ತನಿಖೆ ನಡೆಸುತ್ತಿದೆ ಎಂದ ಸಂಸದೆ, ಒಮ್ಮೆ ತನಿಖೆ ಮುಗಿದ ನಂತರ ಅದನ್ನು ನಿಷೇಧಿಸಲಾಗುವುದು ಎಂದರು.
Kshetra Samachara
20/02/2021 06:03 pm