ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಾಜ್ಯಸಭಾ ಸದಸ್ಯ ನಾರಾಯಣ ಕೆ.ಬೆಂಗಳೂರು ಅವರಿಗೆ ಅಭಿನಂದನಾ ಕಾರ್ಯಕ್ರಮ

ಮಂಗಳೂರು: ಭಾರತ ಸರಕಾರದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಕೆ.ನಾರಾಯಣ ಬೆಂಗಳೂರು ಅವರಿಗೆ ನೇಕಾರ ಸಮುದಾಯದ ನಾರಾಯಣಾಭಿನಂದನಾ ಸಮಿತಿಯ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.

ಈ ಬಗ್ಗೆ ಮಾಹಿತಿ ನೀಡಿದ ಶ್ರೀಚೀರುಂಬಾ ಕ್ರೆಡಿಟ್ ಕೋಅಪ್ ಸೊಸೈಟಿ ಅಧ್ಯಕ್ಷೆ ಶಾಂತಾ ರವೀಂದ್ರ ಮಾತನಾಡಿ, ಅಭಿನಂದನಾ ಕಾರ್ಯಕ್ರಮವು ಫೆ‌.21ರಂದು‌ ಮಧ್ಯಾಹ್ನ 3ಗಂಟೆಗೆ ನಗರದ ಅಶೋಕನಗರದ ದೇವಾಂಗ ಭವನದಲ್ಲಿ ನಡೆಯಲಿದೆ. ಉಪ್ಪಳ ಕೊಂಡೆವೂರು, ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಕುಕ್ಕಾಡಿ ಕ್ಷೇತ್ರದ ಅಧ್ಯಕ್ಷ ಎಂ.ಮುರಳೀಧರ ಶೆಟ್ಟಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಂತಾ ರವೀಂದ್ರ ಮಾಹಿತಿ ನೀಡಿದರು.

Edited By : Manjunath H D
Kshetra Samachara

Kshetra Samachara

19/02/2021 01:11 pm

Cinque Terre

10.12 K

Cinque Terre

0

ಸಂಬಂಧಿತ ಸುದ್ದಿ