ಬ್ರಹ್ಮಾವರ: ಇಂದಿನಿಂದ ಫಾಸ್ಟ್ ಟ್ಯಾಗ್ ಕಡ್ಡಾಯ ಆದೇಶ ಹಿನ್ನೆಲೆಯಲ್ಲಿ ನವಯುಗ ಕಂಪೆನಿ ಆದೇಶ ಪಾಲನೆಗೆ ಮುಂದಾಗಿದ್ದು, ಉಡುಪಿಯ ಸಾಸ್ತಾನದಲ್ಲಿ ಸ್ಥಳೀಯರು ಟಾಲ್ ಗೇಟ್ ಮುತ್ತಿಗೆ ಹಾಕಿದ್ದಾರೆ.
ಕಂಪೆನಿಯ ನಿರ್ಧಾರಕ್ಕೆ ಸಾಸ್ತಾನ ನಾಗರಿಕರಿಂದ ವಿರೋಧ ವ್ಯಕ್ತವಾಗಿದ್ದು, ಸ್ಥಳೀಯ ಗ್ರಾಮಸ್ಥರು ತಮಗೆ ಫಾಸ್ಟ್ ಟ್ಯಾಗ್ ನಿಂದ ವಿನಾಯಿತಿ ನೀಡುವಂತೆ ಆಗ್ರಹಿಸಿ ಟೋಲ್ ಗೇಟ್ ಮುತ್ತಿಗೆ ಹಾಕಿ ಘೋಷಣೆ ಕೂಗುತ್ತಿದ್ದಾರೆ. ಸ್ಥಳೀಯರು ವಾಹನಗಳ ಸಹಿತ ಟೋಲ್ ಗೇಟ್ ಬಳಿ ಜಮಾಯಿಸುತ್ತಿದ್ದು, ಪೊಲೀಸರಿಗೆ ಜನರನ್ನು ನಿಯಂತ್ರಿಸುವುದೇ ಹರಸಾಹಸವಾಗಿದೆ.
ಸದ್ಯ ಟೋಲ್ ಗೇಟ್ ಕಾಂಟ್ರಾಕ್ಟ್ ಪಡೆದಿರುವ ನವಯುಗ ಕಂಪೆನಿಯು ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ. ಸಾಸ್ತಾನ ಪೇಟೆಯಲ್ಲೇ ನವಯುಗ ಟೋಲ್ ಗೇಟ್ ಇದ್ದು, ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದರೆ ಸ್ಥಳೀಯ ಗ್ರಾಮಸ್ಥರಿಗೆ ಸಂಕಷ್ಟ ಎದುರಾಗಲಿದೆ. ಹೀಗಾಗಿ
ಸ್ಥಳೀಯರಿಂದ ಸುಂಕ ಪಡೆಯಬಾರದು ಎಂದು ಹೋರಾಟ ಪ್ರಾರಂಭಗೊಂಡಿದೆ.
Kshetra Samachara
16/02/2021 12:45 pm