ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬಡವರ ಜೊತೆ ಆಟ ಆಡಿದ್ರೆ ಸರಕಾರ ಉಳಿಯಲ್ಲ; ಯು.ಟಿ. ಖಾದರ್

ಮಂಗಳೂರು: ಆಹಾರ ಸಚಿವ ಉಮೇಶ್ ಕತ್ತಿ ಅವರು ಬಿಪಿಎಲ್ ಕಾರ್ಡ್ ರದ್ದತಿ ಬಗ್ಗೆ ನೀಡಿದ ಹೇಳಿಕೆಗೆ ಮಾಜಿ ಆಹಾರ ಸಚಿವ ಯು.ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯು.ಟಿ.ಖಾದರ್, ಟಿವಿ-ಫ್ರಿಡ್ಜ್, ಬೈಕ್ ಇದ್ದರೆ ಕಾರ್ಡ್ ರದ್ದು ಮಾಡುವುದಾಗಿ ಹೇಳುತ್ತಿದ್ದಾರೆ. ಆ ಪಟ್ಟಿಯಲ್ಲಿ ಮೊಬೈಲ್ ಸೇರಿಸಿದ್ರೆ ಎಲ್ಲ BPL ಕಾರ್ಡ್ ರದ್ದು ಆಗುತ್ತಿತ್ತು. ಮೊಬೈಲ್ ಇಲ್ಲದ ಮನೆಗಳು ಹೇಗೆ ಇಲ್ಲವೋ, ಹಾಗೆಯೇ ಟಿವಿ, ಫ್ರಿಡ್ಜ್, ಬೈಕ್ ಇಲ್ಲದ ಮನೆಗಳಿಲ್ಲ ಎಂದರು.

ಈ ಸರಕಾರಕ್ಕೆ ಜನಸಾಮಾನ್ಯರ ನಾಡಿಮಿಡಿತ ಇನ್ನೂ ಗೊತ್ತಾಗಿಲ್ಲ. ಮೊದಲು ರೇಷನ್ ಕಾರ್ಡ್ ಜನರಿಗೆ ತಲುಪಿಸುವ ಕೆಲಸ ಮಾಡಲಿ ಎಂದು ಹೇಳಿದ ಅವರು, ಈ ಹಿಂದೆಯೂ ಬಿಜೆಪಿ ಸರಕಾರವಿದ್ದಾಗ 15 ಮಾನದಂಡಗಳಿದ್ದವು. ಬಿಜೆಪಿ ಸರಕಾರದ ಅವಧಿಯಲ್ಲಿ 500 ರೂ. ಕರೆಂಟ್ ಬಿಲ್ ಬಂದ್ರೂ ಬಿಪಿಎಲ್ ರದ್ದು ಆಗುತ್ತಿದ್ದವು. ಆದ್ರೆ, ಕಾಂಗ್ರೆಸ್ ಕೇವಲ ಮೂರು ಮಾನದಂಡಗಳನ್ನಷ್ಟೇ ನಿರ್ಧರಿಸಿತ್ತು. ಖುದ್ದು ನಾನೇ ಆಹಾರ ಸಚಿವನಾಗಿದ್ದಾಗ ಈ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿತ್ತು ಎಂದರು.

ಇನ್ನು, ಬಿಜೆಪಿ ಸರಕಾರ ಇದಕ್ಕಿಂತ ಉತ್ತಮ ಯೋಜನೆ ನೀಡುವ ಕೆಲಸ ಮಾಡಲಿ. ತಪ್ಪನ್ನು ಸರಿಪಡಿಸುವ ಬದಲು ಬಿಜೆಪಿ ಸರಕಾರ ಮತ್ತೆ ಮತ್ತೆ ತಪ್ಪು ಮಾಡುತ್ತಿದೆ. ರಾಜ್ಯ, ಕೇಂದ್ರ ಸರಕಾರ ಸೇರಿ ಬಡವರ ಯೋಜನೆಯನ್ನು ನಾಶ ಮಾಡಲು ಮುಂದಾಗಿದೆ. ಕಾಂಗ್ರೆಸ್ ಸರಕಾರ ಮಾಡಿದ್ದು "ಗರೀಬಿ ಹಠಾವೋ". ಆದರೆ, ಬಿಜೆಪಿ ಮಾಡುತ್ತಿರುವುದು "ಗರೀಬೋಂಕೊ ಹಠಾವೋ". ಸರಕಾರದ ಈ ಕೆಟ್ಟ ನಿರ್ಧಾರದ ಬಗ್ಗೆ ನಾನು ಸಚಿವರ ಜೊತೆ ಮಾತನಾಡುತ್ತೇನೆ. ಈ ನಿರ್ಧಾರದಿಂದ ಸರಕಾರ ಹಿಂದೆ ಸರಿಯದಿದ್ದರೆ ಸರಕಾರ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

Edited By : Manjunath H D
Kshetra Samachara

Kshetra Samachara

15/02/2021 03:45 pm

Cinque Terre

12.19 K

Cinque Terre

2

ಸಂಬಂಧಿತ ಸುದ್ದಿ