ಮುಲ್ಕಿ: ಕಾರ್ನಾಡ್ ದರ್ಗಾ ಫ್ರೆಂಡ್ಸ್ ಕ್ರಿಕೆಟರ್ಸ್ ಆಶ್ರಯದಲ್ಲಿ ನಡೆದ ಮುಲ್ಕಿ ಪ್ರೀಮಿಯರ್ ಚಾಂಪಿಯನ್ಸ್ ಲೀಗ್ -2021ರ ಬಹುಮಾನ ವಿತರಣೆ ನಡೆಯಿತು. ಮುಲ್ಕಿ ನಪಂ ಸದಸ್ಯ ಹಕೀಂ ಕಾರ್ನಾಡ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಸ್ತಿನ ಕ್ರೀಡೆಯಾದ ಕ್ರಿಕೆಟ್ ಸಾಮರಸ್ಯ ಬೆಳೆಯಲು ಸಹಕಾರಿ ಎಂದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಕೆ.ಎಂ. ಖಾದರ್, ಕಬೀರ್ ಕಾರ್ನಾಡ್, ಫೈಝಲ್ ಬಿ.ಎಂ. ಉಪಸ್ಥಿತರಿದ್ದರು.
ದರ್ಗಾ ಫ್ರೆಂಡ್ಸ್ ತಂಡದ ಹಿರಿಯ ಆಟಗಾರರನ್ನು ಗೌರವಿಸಲಾಯಿತು. ಬಳಿಕ ನಡೆದ ಬಹುಮಾನ ವಿತರಣೆ ಸಮಾರಂಭದಲ್ಲಿ ಮುಲ್ಕಿ ಪ್ರೀಮಿಯರ್ ಚಾಂಪಿಯನ್ಸ್ ಲೀಗ್- 2021ರ ವಿನ್ನರ್ ಪ್ರಶಸ್ತಿಯನ್ನು ಯಶವಂತ ನಾಯಕತ್ವದ ಜೆಡಿವೈಸಿ ಕೊಳಚಿಕಂಬಳ ತಂಡಕ್ಕೆ ನೀಡಲಾಯಿತು. ರನ್ನರ್ಸ್ ಅಪ್ ಪ್ರಶಸ್ತಿ ರೂಪೇಶ್ ಶೆಟ್ಟಿ ನಾಯಕತ್ವದ ಜಾಲಿ ಫ್ರೆಂಡ್ಸ್ ಪಂಜಿನಡ್ಕ ಪಡೆಯಿತು.
ಜಾಲಿ ಫ್ರೆಂಡ್ಸ್ ಪಂಜಿನಡ್ಕ ತಂಡದ ರೂಪೇಶ್ ಶೆಟ್ಟಿ ಸರಣಿ ಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡರೆ, ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಜೆಡಿವೈಸಿ ತಂಡದ ಶರತ್ ಬೆಸ್ಟ್ ಬ್ಯಾಟ್ಸ್ ಮನ್ ಹಾಗೂ ಜಾಲಿ ಫ್ರೆಂಡ್ಸ್ ತಂಡದ ನಾಗರಾಜ್ ಬೆಸ್ಟ್ ಬೌಲರ್ ಪ್ರಶಸ್ತಿ ಪಡೆದುಕೊಂಡರು. ಫೈನಲ್ ಪಂದ್ಯಕೂಟದ ಪಂದ್ಯಶ್ರೇಷ್ಠ ಪ್ರಶಸ್ತಿ ಜೆಡಿವೈಸಿ ತಂಡದ ಆಲ್ರೌಂಡರ್ ಆಟಗಾರ ಗೌರೀಶ್ ತನ್ನದಾಗಿಸಿಕೊಂಡರು.
Kshetra Samachara
13/02/2021 07:15 pm