ಮಂಗಳೂರು: ನಗರದ ಹೋಬಳಿ ಮನೆತನ ಜಪ್ಪುಗುಡ್ಡೆ ಚಾವಡಿಯಲ್ಲಿ ಪರಂಪರಾಗತವಾಗಿ ನಡೆದು ಬಂದಿರುವ ಕಟ್ಟುಕಟ್ಟಳೆಯಂತೆ ಜಪ್ಪುಗುಡ್ಡೆಗುತ್ತು ಮನೆತನದ ಹಿರಿಯರಾದ ಬಿ.ರಮೇಶ್ ಶೆಟ್ಟಿಯವರ ಪಟ್ಟ ಸ್ವೀಕಾರ ಕಾರ್ಯಕ್ರಮ ಫೆ.15 ರಂದು ಬೆಳಗ್ಗೆ 11-12 ಗಂಟೆಗೆ ನಡೆಯಲಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಹೇಳಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಐತಿಹಾಸಿಕವಾಗಿ ಮಂಗಳೂರು ಹೋಬಳಿಯಲ್ಲಿ ಪ್ರಥಮ ಗೌರವಕ್ಕೆ ಪಾತ್ರರಾದ ಕೊಡಿಯಾಲಗುತ್ತು, ಜಪ್ಪುಗುಡ್ಡೆಗುತ್ತು ಮತ್ತು ಬಡುಲಗುತ್ತು ಮೂರು ಮನೆತನದಲ್ಲಿ ಜಪ್ಪುಗುಡ್ಡೆಗುತ್ತು ಮನೆತನ ಕೂಡಾ ಭವ್ಯ ಪರಂಪರೆ ಹೊಂದಿದೆ ಎಂದು ಹೇಳಿದರು.
ಜಪ್ಪುಗುಡ್ಡೆಗುತ್ತು ಮನೆತನದ ಪಟ್ಟದ ಹೆಸರು ಸುಬ್ಬಯ್ಯ ಭಂಡಾರಿ ಪಟ್ಟ ಸ್ವೀಕಾರವಾದ ಬಳಿಕ ಅದು ಸುಬ್ಬಯ್ಯ ಭಂಡ್ರಿಯಾಲ್ ಎಂದು ಗೌರವಪೂರ್ವಕವಾಗಿ ಪದನಾಮದಿಂದಲೇ ಯಜಮಾನರನ್ನು ಸಂಬೋಧಿಸಲಾಗುತ್ತದೆ. ಈ ಪಟ್ಟ ಸ್ವೀಕಾರವು ಜಿಲ್ಲೆಯ ವಿವಿಧ ಮನೆತನಗಳ ಪಟ್ಟ ಗುರಿಕಾರರು ಉಪಸ್ಥಿತರಿರುವರು ಎಂದು ಮಾಲಾಡಿ ಅಜಿತ್ ಕುಮಾರ್ ರೈ ಹೇಳಿದರು.
Kshetra Samachara
13/02/2021 06:49 pm