ಮಂಗಳೂರು: ಬಸ್ ಪಾಸ್ ಅವ್ಯವಸ್ಥೆ ಸರಿಪಡಿಸಬೇಕು ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕೆಂದು ಆಗ್ರಹಿಸಿ ಎನ್ಎಸ್ ಯುಐ ದ.ಕ. ಜಿಲ್ಲಾ ಘಟಕ ನಗರದ ಲಾಲ್ ಬಾಗ್ ನಲ್ಲಿರುವ ಕೆಎಸ್ಆರ್ ಟಿಸಿ ಮುಂಭಾಗ ಪ್ರತಿಭಟನೆ ನಡೆಸಿತು.
ಎನ್ಎಸ್ ಯುಐ ರಾಜ್ಯ ಕಾರ್ಯದರ್ಶಿ ಫಾರೂಕ್ ಬಯಾಬೆ ಮಾತನಾಡಿ, ಸರಕಾರ ಸಾಕಷ್ಟು ವರ್ಷಗಳ ಹಿಂದಿನಿಂದಲೇ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಮಾಡಿತ್ತು. ಇದೀಗ ಕೊರೊನಾದ ಬಳಿಕ ಬಸ್ ಪಾಸ್ ವ್ಯವಸ್ಥೆ ಮಾಡಲಾಗುತ್ತದೆ. ಪರೀಕ್ಷೆ ನಡೆಯುವವರೆಗೆ ಉಚಿತ ಬಸ್ ಪಾಸ್ ಪ್ರಯಾಣ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಸರಕಾರ ಪೊಳ್ಳು ಭರವಸೆ ನೀಡಿ ವಿದ್ಯಾರ್ಥಿಗಳನ್ನು ವಂಚಿಸಿದೆ. ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಂಕಷ್ಟಕ್ಕೊಳಗಾಗಿದ್ದಾರೆ. ಆದ್ದರಿಂದ ಎನ್ಎಸ್ ಯುಐ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವವರೆಗೆ ಹೋರಾಟ ನಡೆಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಎನ್ಎಸ್ ಯುಐ ಅಧ್ಯಕ್ಷ ಸವಾದ್ ಸುಳ್ಯ, ಶೌನಕ್ ರೈ, ಶೇಖ್ ಅಫ್ಶನ್, ಕೌಶಿಕ್ ಗೌಡ, ಆಶಿಕ್ ಅರಂತೋಡು, ಶಫೀಕ್, ಅಂಕುಶ್ ಶೆಟ್ಟಿ, ಪ್ರಿಸ್ಟನ್, ರಾಝಿ ಹಾಗೂ ಇನ್ನಿತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Kshetra Samachara
13/02/2021 05:52 pm