ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಪಡುಮಲೆ ಕೋಟಿ- ಚೆನ್ನಯ ಜನ್ಮಸ್ಥಳದಲ್ಲಿ ಪಾರ್ಥನೆ ಸಲ್ಲಿಸಿ, ಕ್ಷಮೆ ಯಾಚಿಸಿದ ಜಗದೀಶ್ ಅಧಿಕಾರಿ

ಮೂಡುಬಿದಿರೆ: ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯರು ಹಾಗೂ ಬಿಲ್ಲವ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ವಿವಾದಕ್ಕೆ ಒಳಗಾಗಿದ್ದ ಬಿಜೆಪಿ ಮುಖಂಡ ಕೆ.ಪಿ. ಜಗದೀಶ್ ಅಧಿಕಾರಿ ಅವರು ಗುರುವಾರ ಪುತ್ತೂರು ಪಡುಮಲೆಯಲ್ಲಿರುವ ಕೋಟಿ- ಚೆನ್ನಯರ ಜನ್ಮಸ್ಥಳಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ ಬಳಿಕ ತಪ್ಪು ಕಾಣಿಕೆ ಹಾಕಿ, ಕ್ಷಮೆ ಯಾಚಿಸಿದರು.

ಕೆಲವು ದಿನಗಳ ಹಿಂದೆ ನಾನು ಕೋಟಿ- ಚೆನ್ನಯರ ಹಾಗೂ ಬಿಲ್ಲವರ ಬಗ್ಗೆ ಮಾತನಾಡಿರುವುದರಿಂದ ಸಮಾಜದ ಬಂಧುಗಳಿಗೆ ನೋವಾಗಿದೆ. ನಾನು ಆತ್ಮವಿಮರ್ಶೆ ಮಾಡಿಕೊಂಡಿದ್ದು, ನನ್ನಿಂದ ತಪ್ಪಾಗಿದೆ. ಬಿಲ್ಲವ ಸಮಾಜದವರಲ್ಲಿ ನಾನು ಕ್ಷಮೆಯನ್ನು ಯಾಚಿಸಿ, ನನ್ನಿಂದ ಆದ ತಪ್ಪಿಗೆ ಕೋಟಿ -ಚೆನ್ನಯರು ಹಾಗೂ ದೇಯಿ ಬೈದತಿಗೆ ತಪ್ಪು ಕಾಣಿಕೆ ಹಾಕಿದ್ದೇನೆ.

ಕಾರಣಿಕ ಶಕ್ತಿಗಳಾದ ಅವಳಿ ವೀರ ಪುರುಷರ ಅನುಗ್ರಹದಿಂದ ನಾವೆಲ್ಲರೂ ಶಾಂತಿ, ಸೌಹಾರ್ದತೆಯಿಂದ ಬದುಕೋಣ ಎಂದು ತಿಳಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

11/02/2021 07:04 pm

Cinque Terre

22.84 K

Cinque Terre

1

ಸಂಬಂಧಿತ ಸುದ್ದಿ