ಬ್ರಹ್ಮಾವರ: ಉಡುಪಿ ವಿಧಾನಸಭೆ ಕ್ಷೇತ್ರದ ಬ್ರಹ್ಮಾವರ ತಾಲೂಕಿನ ಹೇರೂರು ಗ್ರಾಮದ ಮಡಿಸಾಲು ನದಿಗೆ ಶಾಸಕ ಕೆ. ರಘುಪತಿ ಭಟ್ ಅವರ ಶಿಫಾರಸ್ಸಿನ ಮೇರೆಗೆ ಸಣ್ಣ ನೀರಾವರಿ ಇಲಾಖೆಯಿಂದ ಸೇತುವೆ ಸಹಿತ ಉಪ್ಪುನೀರು ತಡೆ ಅಣೆಕಟ್ಟು ನಿರ್ಮಾಣಕ್ಕೆ 35 ಕೋಟಿ ರೂ. ಅನುದಾನ ಮಂಜೂರಾಗಿದೆ.
ಈ ಕಾಮಗಾರಿ ನಿರ್ವಹಿಸುವ ಭಾಗದಲ್ಲಿ ನದಿ ದಂಡೆ ಸಂರಕ್ಷಣೆ ಹಾಗೂ ಉಪ್ಪುನೀರು ಸಮರ್ಪಕವಾಗಿ ತಡೆಯಲು ಕೆಲವೊಂದು ಭಾಗದಲ್ಲಿ ನದಿಯನ್ನು ಸೇರುವ ಸಣ್ಣ ಸಣ್ಣ ತೋಡುಗಳಿಗೆ ಕಿಂಡಿ ಅಣೆಕಟ್ಟು ಹಾಗೂ ನದಿಪಾತ್ರದಲ್ಲಿ ರಸ್ತೆ ನಿರ್ಮಿಸುವ ಸಂಬಂಧ ಸ್ಥಳೀಯರ ಬೇಡಿಕೆಯಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಶಾಸಕ ಕೆ. ರಘುಪತಿ ಭಟ್ ಸ್ಥಳಕ್ಕೆ ಭೇಟಿ ನೀಡಿದರು.
ಕಾಮಗಾರಿ ನಡೆಯುವ ಸ್ಥಳ ಪರಿಶೀಲಿಸಿ ಸ್ಥಳೀಯರೊಂದಿಗೆ ಚರ್ಚಿಸಿ ಸ್ಥಳೀಯರ ಬೇಡಿಕೆಯಂತೆ ಸಮಗ್ರವಾಗಿ ಕಾಮಗಾರಿ ನಿರ್ವಹಿಸಲು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಶೇಷಕೃಷ್ಣ, ಪಿಡಿಒ ಆದರ್ಶ, ಹಾರಾಡಿ ತಾಪಂ ಸದಸ್ಯೆ ವಸಂತಿ, ಬಿಜೆಪಿ ಗ್ರಾಮಾಂತರ ಅಧ್ಯಕ್ಷೆ ವೀಣಾ ನಾಯಕ್, ಮುಖಂಡರಾದ ಚಂದ್ರಶೇಖರ್ ಬೈಕಾಡಿ, ರಘುರಾಮ ಶೆಟ್ಟಿ ಉಪಸ್ಥಿತರಿದ್ದರು.
Kshetra Samachara
09/02/2021 08:19 pm