ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಬ್ರಿ ತಾಲ್ಲೂಕು : ಕಾಂಗ್ರೆಸ್‌ ಕೊಡುಗೆ : ತಾಲ್ಲೂಕಿನ ವಿಚಾರದಲ್ಲಿ ರಾಜಕೀಯ ಬೇಡ - ಸಾಧ್ಯವಾದರೆ ಕಡ್ತಲವನ್ನು ಹೆಬ್ರಿಗೆ ಸೇರಿಸಿ : ನೀರೆ ಕೃಷ್ಣ ಶೆಟ್ಟಿ.

ದಿ.ಗೋಪಾಲ ಭಂಡಾರಿಯವರ ಸತತ ಪ್ರಯತ್ನದ ಫಲ ಮತ್ತು ನಮ್ಮೇಲ್ಲರ ಹೋರಾಟದ ಫಲವಾಗಿ ಹೆಬ್ರಿ ತಾಲ್ಲೂಕು ಆಗಿದೆ. ಕಾಂಗ್ರೆಸ್‌ ಹೆಬ್ರಿಗೆ ನೀಡಿದ ದೊಡ್ಡ ಕೊಡುಗೆ. ಈಗ ಬಿಜೆಪಿ ಸಮನಮನಸ್ಕ ಸಮಿತಿಯ ಹೆಸರಿನಲ್ಲಿ ತಾಲ್ಲೂಕು ಹೇಸರಿನಲ್ಲಿ ರಾಜಕೀಯ ಮಾಡುತ್ತಿದೆ. ಅಂದು ಕಾರ್ಕಳ ತಾಲ್ಲೂಕಿನಲ್ಲಿರುವ ಕಡ್ತಲವನ್ನು ಸೇರಿಸಲು ಇದೇ ಬಿಜೆಪಿ ಮುಖಂಡರು ಆಕ್ಷೇಪ ಮಾಡಿ ತಪ್ಪಿಸಿದರು. ಈಗ ಸೇರಿಸಬೇಕು ಎಂದು ಸಮಿತಿಯ ಹೆಸರಿನಲ್ಲಿ ಜನತೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಹೆಬ್ರಿ ತಾಲ್ಲೂಕಿನ ವಿಚಾರದಲ್ಲಿ ಎಲ್ಲರೂ ಅವರವರ ಕ್ಷೇತ್ರಗಳ ಗ್ರಾಮಗಳನ್ನು ಸೇರಿಸಲು ರಾಜಕೀಯ ಲಾಭದ ಉದ್ದೇಶದಿಂದ ಅನ್ಯಾಯ ಮಾಡಿದರು. ಈಗ ಹೊಸ ನಾಟಕ ಶುರು ಮಾಡಿದ್ದಾರೆ. ಹೆಬ್ರಿ ತಾಲ್ಲೂಕಿಗೆ ಕಡ್ತಲ ಗ್ರಾಮ ಪಂಚಾಯತಿ ಸಹಿತ ಹೆಬ್ರಿ ಕೇಂದ್ರ ಸ್ಥಾನದ ೧೫ ಕಿಮೀ ವ್ಯಾಪ್ತಿಯ ಎಲ್ಲಾ ಗ್ರಾಮಗಳನ್ನು ಸೇರಿಸುವುದಕ್ಕೆ ಕಾಂಗ್ರೆಸ್‌ ಸಹಮತವಿದೆ. ಈಗ ಎಲ್ಲವೂ ಬಿಜೆಪಿ ಮತ್ತು ಅವರದೇ ಸರ್ಕಾರದ ಕೈಯಲ್ಲಿ ಇರುವಾಗ ಸಮಾನಮನಸ್ಕರ ಸಮಿತಿಯ ಹೆಸರಿನ ಹೊಸ ನಾಟಕ ಏಕೆ ಎಂದು ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಪ್ರಶ್ನಿಸಿದರು. ಸಾಧ್ಯವಾದರೆ ಮೊದಲು ಹೆಬ್ರಿಯಲ್ಲಿ ಮೊದಲು ಅಟಲ್‌ ಜನಸ್ನೇಹಿ ಕೇಂದ್ರ, ನಾಡಕಛೇರಿ ತೆರದು ಜನತೆಗೆ ಕಂದಾಯ ಸೇವೆ ನೀಡಲಿ. ತಾಲ್ಲೂಕಿನ ಹೆಸರಿನಲ್ಲಿ ರಾಜಕೀಯ ಮಾಡಬೇಡಿ ಎಂದು ಮಂಜುನಾಥ ಪೂಜಾರಿ ಹೇಳಿದರು.

ಬೆಲೆ ಏರಿಕೆ : ತೆರಿಗೆ ಹೊರೆ : ಫೆಬ್ರವರಿ ೦೯ ರಂದು ಹೆಬ್ರಿಯಲ್ಲಿ ಪ್ರತಿಭಟನೆ : ಪೆಟ್ರೋಲ್‌ ಗ್ಯಾಸ್‌ ಸಹಿತ ದಿನಬಳಕೆಯ ವಸ್ತುಗಳು ಬೆಲೆ ಏರಿಕೆ ಮತ್ತು ಬಿಜೆಪಿಯ ಜನವಿರೋಧಿ ನೀತಿ ವಿರುದ್ಧ ಇದೇ ೯ರಂದು ಹೆಬ್ರಿಯ ಬಸ್‌ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಲಿದ್ದು ಕಾಂಗ್ರೆಸ್‌ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಗ್ರಾಮಸ್ಥರು ಭಾಗವಹಿಸುವಂತೆ ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಮಾಡಿದರು.

ಮುದ್ರಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಶಿಕಲಾ ಡಿ.ಪೂಜಾರಿ, ಯುವ ಮುಖಂಡ ಹುತ್ತುರ್ಕೆ ದಿನೇಶ ಶೆಟ್ಟಿ, ಶಿವಪುರ ಕಾಂಗ್ರೆಸ್‌ ಅಧ್ಯಕ್ಷ ವಿಶ್ವನಾಥ ನಾಯಕ್‌, ಮುಖಂಡರಾದ ಶೀನ ಪೂಜಾರಿ, ಶಿವರಾಮ ಪೂಜಾರಿ, ಹೆಬ್ರಿ ಪಂಚಾಯಿತಿ ಸದಸ್ಯ ಕನ್ಯಾನ ಸಂತೋಷ ನಾಯಕ್‌ ಭಾಗವಹಿಸಿದ್ದರು.

Edited By : Manjunath H D
Kshetra Samachara

Kshetra Samachara

07/02/2021 10:31 am

Cinque Terre

16.3 K

Cinque Terre

1

ಸಂಬಂಧಿತ ಸುದ್ದಿ